Peacock dancing: ಮೊದಲ ಮಳೆಗೆ ಗರಿ ಬಿಚ್ಚಿ ಕುಣಿದ ಮಯೂರ.. ನವಿಲಿನ ನಾಟ್ಯಕ್ಕೆ ಮನಸೋತ ಪ್ರವಾಸಿಗರು - ಚಮಾನಿಯಾ ಮೋಡ್ ಬಳಿಯ ಚಂಪಾಪುರ ರಸ್ತೆ
ಬಗಹ(ಬಿಹಾರ):ಭಾರತ ದೇಶದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲು ತನ್ನ ಸೌಂದರ್ಯದಿಂದಲೇ ಎಲ್ಲರೂ ತನ್ನತ್ತ ಆಕರ್ಷಿಸುತ್ತದೆ. ತನ್ನ ತಲೆಯ ಜುಟ್ಟಿನಿಂದ ಹಿಡಿದು ಗರಿಯವರೆಗೂ ವಿವಿಧ ಹೊಳಪಿನ ಬಣ್ಣವನ್ನು ನವಿಲು ಹೊಂದಿದ್ದು, ಮಳೆಗಾಲದಲ್ಲಿ ನವಿಲು ಮನೋಹರವಾಗಿ ನೃತ್ಯ ಮಾಡುತ್ತದೆ. ಗಂಡು ನವಿಲು ಕಾಮನ ಬಿಲ್ಲಿನ ಬಣ್ಣಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ. ಮಯೂರನ ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಅರಳುತ್ತದೆ. ನವಿಲು ಗರಿಯ ಮಧ್ಯದಲ್ಲಿ ಕಣ್ಣಿನ ರೀತಿಯ ಚಿತ್ರವನ್ನು ಕಾಣಬಹುದು. ಇನ್ನು ಹೆಣ್ಣು ನವಿಲು ಹಸಿರು ಬಣ್ಣದ ಕುತ್ತಿಗೆ ಹಾಗೂ ಮಸುಕು ಕಂದು ಬಣ್ಣದ ಚಿಕ್ಕ ಗರಿಗಳ ಗುಚ್ಛವನ್ನು ಹೊಂದಿರುತ್ತದೆ.
ನವಿಲು ಗರಿ ಬಿಚ್ಚಿ ಕುಣಿಯುವ ದೃಶ್ಯ ಸಿಗುವುದು ಬಲು ಅಪರೂಪ. ಆದರೆ ಬಿಹಾರದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಚಮಾನಿಯಾ ಮೋಡ್ ಬಳಿಯ ಚಂಪಾಪುರ ರಸ್ತೆಯಲ್ಲಿ ನವಿಲೊಂದು ತನ್ನ ಗರಿಗಳನ್ನು ಬಿಚ್ಚಿ ಮಳೆಯನ್ನು ಸ್ವಾಗತಿಸುವ ಸುಂದರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನವಿಲು ತನ್ನದೇ ಶೈಲಿಯಲ್ಲಿ ಕುಣಿಯುವ ಸಾಮರ್ಥ್ಯ ಹೊಂದಿದ್ದು, ಮೊದಲು ತನ್ನ ಉದ್ದನೆಯ ಗರಿಗಳನ್ನು ಬಿಚ್ಚಿ ಮುಂದಕ್ಕೆ ಬಾಗುತ್ತದೆ. ನಂತರ ಎಲ್ಲರನ್ನು ಮನಸೂರೆಗೊಳಿಸುವ ನೃತ್ಯವನ್ನು ಆರಂಭಿಸುತ್ತದೆ. ಇನ್ನು ಈ ನವಿಲಿನ ವಯಸ್ಸು ನೋಡುವುದಾದರೇ 25ರಿಂದ 30 ವರ್ಷ. ಗಂಡು ನವಿಲಿನ ಉದ್ದ ಸುಮಾರು 215 ಸೆಂ.ಮೀ ಮತ್ತು ಹೆಣ್ಣು ನವಿಲಿನ ಉದ್ದ ಕೇವಲ 50 ಸೆಂ.ಮೀ ಇದ್ದು, ಗರಿಗಳಿಂದ ನವಿಲನ್ನು ಹೆಣ್ಣು ಗಂಡು ಎಂದು ಗುರುತಿಸಲಾಗುತ್ತದೆ.
ಇದನ್ನೂ ಓದಿ:ಸಿಂಹಿಣಿ ಬಾಯಿಯಿಂದ ಗೋಮಾತೆ ರಕ್ಷಿಸಿದ ಅನ್ನದಾತ! ರೈತನ ಡೇರಿಂಗ್ ವಿಡಿಯೋ ವೈರಲ್..