ನೂರು ಸಂಚಿಕೆ ತಲುಪಲಿರುವ ಮನ್ ಕಿ ಬಾತ್: ಮರಳಲ್ಲಿ ಮೂಡಿದ ರೇಡಿಯೋದೊಂದಿಗಿನ ಮೋದಿ ಕಲಾಕೃತಿ - ಈಟಿವಿ ಭಾರತ ಕನ್ನಡ
ಪುರಿ (ಒಡಿಶಾ):ಪಿಎಂ ಮೋದಿ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ತನ್ನ 100ನೇ ಸಂಚಿಕೆಯನ್ನು ಪೂರ್ಣಗೊಳಿಸಲಿದೆ. ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್‌ನಲ್ಲಿ ರೇಡಿಯೋದೊಂದಿಗಿನ ಪ್ರಧಾನಿ ಮೋದಿ ಅವರ ಮರಳು ಕಲೆಯನ್ನು ರಚಿಸಿದ್ದಾರೆ. ಮನ್ ಕಿ ಬಾತ್ ನ 100ನೇ ಸಂಚಿಕೆಯನ್ನು ಸ್ವಾಗತಿಸಲು ಸುದರ್ಶನ್ 8 ಅಡಿ ಎತ್ತರದ ಮರಳು ಕಲೆಯನ್ನು ರಚಿಸಿದ್ದಾರೆ. ಇದಕ್ಕಾಗಿ ಸುಮಾರು 7 ಟನ್ ಮರಳನ್ನು ಬಳಸಿದ್ದಾರೆ. ಪ್ರಧಾನಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 100ನೇ ಸಂಚಿಕೆ ನಾಳೆ (ಭಾನುವಾರ) ಪ್ರಸಾರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದ ಮೂಲಕ ದೇಶದ ಜನರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮರಳು ಕಲಾವಿದ ಸುದರ್ಶನ್, ಏಪ್ರಿಲ್ 30 ರಂದು, ದಯವಿಟ್ಟು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ಅತ್ಯಂತ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದ 100 ನೇ ಆವೃತ್ತಿಯ ಆಲಿಸ. ಒಡಿಶಾದ ಪುರಿ ಬೀಚ್‌ನಲ್ಲಿ ಸ್ಯಾಂಡ್ಆರ್ಟ್ನಲ್ಲಿ ಮನ್ ಕಿ ಬಾತ್‌ನ ಸ್ಮರಣೀಯ ಸಂಚಿಕೆ ಆಚರಿಸಲು ಮತ್ತು ಸ್ವಾಗತಿಸಲು ನಾನು 100 ಮರಳು ರೇಡಿಯೊಗಳನ್ನು ರಚಿಸಿದ್ದೇನೆ ಎಂದು ಸುದರ್ಶನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕಾರಿನಲ್ಲಿ ಕೂರುವ ವೇಳೆ ಸ್ಲಿಪ್ ಆದ ಸಿದ್ದರಾಮಯ್ಯ: ನೀರು ಕೊಟ್ಟು ಆರೈಕೆ ಮಾಡಿದ ಸಹಾಯಕ