ಧಾವಂತದಲ್ಲಿ ಫ್ಲ್ಯಾಟ್ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿದ ವ್ಯಕ್ತಿ: ದೇವರಂತೆ ಬಂದ ಆರ್‌ಪಿಎಫ್ ಸಿಬ್ಬಂದಿ - ಈಟಿವಿ ಭಾರತ ಕನ್ನಡ
ಚಲಿಸುತ್ತಿದ್ದ ರೈಲು ಏರುವಾಗ ಕಾಲು ಜಾರಿ ರೈಲಿನ ನಡುವೆ ಪ್ರಯಾಣಿಕರೊಬ್ಬರು ಸಿಲುಕಿಕೊಂಡು, ಅವರನ್ನು ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿರುವ ಘಟನೆ ಸೂರತ್ ರೈಲು ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕರೊಬ್ಬರು ಓಡಿ ಬಂದು ಚಲಿಸುತ್ತಿದ್ದ ರೈಲನ್ನು ಏರಿದ್ದಾರೆ. ಕಾಲು ಜಾರಿ ಕೆಳಗೆ ಬಿದ್ದು ಫ್ಲ್ಯಾಟ್ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದಾರೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಆರ್‌ಪಿಎಫ್ ಸಿಬ್ಬಂದಿ ಸಂದೀಪ್ ಯಾದವ್ ಎನ್ನುವವರು ಧಾವಿಸಿ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲು ನಿಂತ ಕಾರಣ ಅದೃಷ್ಟವಶಾತ್ ಪ್ರಯಾಣಿಕನ ಪ್ರಾಣ ಉಳಿದಿದೆ. ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಡೀ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.
Last Updated : Feb 3, 2023, 8:36 PM IST