ಪ್ಯಾರಾಗ್ಲೈಡರ್ ಅಪಘಾತ: ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಗ್ಲೈಡರ್, ತಪ್ಪಿದ ಭಾರಿ ಅನಾಹುತ - ವಿಡಿಯೋ ನೋಡಿ - ETV Bharath Karnataka
ಕೊಡಗು:ಪ್ಯಾರಾಗ್ಲೈಡರ್ ಅಪಘಾತವಾಗಿ ಪ್ರಾಣಪಾಯದಿಂದ ಇಬ್ಬರು ಪಾರಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಗ್ಲೈಡರ್ ಕೆಳಗೆ ಬೀಳುತ್ತಿರುವ ದೃಶ್ಯ ರಸ್ತೆಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೋನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮ ಲಕ್ಷ್ಮಣ ತೀರ್ಥ ನದಿ ಸೇತುವೆ ಬಳಿ ಸಂಜೆ 4.45ರ ಸುಮಾರಿಗೆ ಅಪಘಾತವಾಗಿದೆ. ಹಾರಾಡುತ್ತಿದ್ದ ಗ್ಲೈಡರ್ನ ಇಂಜಿನ್ನಲ್ಲಿ ತಾಂತ್ರಿಕ ದೋಷ ಉಂಟಾಗಿ ಏಕಾಏಕಿ ಭೂ ಸ್ಪರ್ಶವಾಗಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ವಾಹನಕ್ಕೆ ಅಡ್ಡಲಾಗಿ ಬಿದ್ದಿದ್ದು, ಯಾವುದೇ ಪ್ರಾಣಪಾಯವಾಗಿಲ್ಲ. ರಸ್ತೆಯಲ್ಲಿ ಏಕಾಏಕಿ ಇಳಿಯುವ ವೇಳೆ ಇಕೋ ಕಾರು ಬರುತ್ತಿದ್ದು ಚಾಲಕನ ಚಾಣಾಕ್ಷತನದಿಂದ ಅಪಘಾತ ತಪ್ಪಿದೆ.
ಇದನ್ನೂ ಓದಿ:ಪ್ಯಾರಾಗ್ಲೈಡರ್ ಅಪಘಾತ: ಮರಗಳ ಮಧ್ಯೆ ಸಿಲುಕಿದ ಯುವಕರು - ವಿಡಿಯೋ