ಪಂಚರತ್ನ ರಥಯಾತ್ರೆ: 15 ಸಾವಿರ ನಾಣ್ಯದ ಹಾರ, ನೇಗಿಲು ಹಾರ ಹಾಕಿ ಹೆಚ್ಡಿಕೆಗೆ ಸ್ವಾಗತ - ಈಟಿವಿ ಭಾರತ ಕನ್ನಡ
ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿಂದು ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ 12 ವಿವಿಧ ರೀತಿಯ ಬೃಹತ್ ಹಾರಗಳನ್ನು ಹಾಕುವ ಮೂಲಕ ಜೆಡಿಎಸ್ ಕಾರ್ಯಕರ್ತರು ಯಾತ್ರೆಯನ್ನು ಸ್ವಾಗತಿಸಿದರು. ನಾಣ್ಯದ ಹಾರ, ಭತ್ತ ನೇಗಿಲು ಹಾರ, ಎತ್ತಿನ ಲಾಳದ ಹಾರ, ಜೆಡಿಎಸ್ ಚಿಹ್ನೆಯ ಹಾರ, ಮಣ್ಣಿನ ಹಾರ, ಕಿರೀಟ ಹಾರ, ಕಬ್ಬಿನ ಹಾರ, ಹೆಗ್ಗೆರೆಯಲ್ಲಿ ಸೇಬಿನ ಹಾರ, ಲಕ್ಕೇನಹಳ್ಳಿಯಲ್ಲಿ ಚೆಂಡು ಹೂವಿನ ಹಾರ, ಹೊನ್ನುಡಿಕೆಯಲ್ಲಿ ಕೊಬ್ಬರಿ ಹಾರ, ಸೌತೆಕಾಯಿ, ಹೊಂಬಾಳೆ ಹಾರ ಹಾಕಲಾಯಿತು. ಅಲ್ಲದೆ ಡ್ರೋನ್ಗಳನ್ನು ಬಳಸಿ ಜೆಡಿಎಸ್ ಬಾವುಟವನ್ನು ಮುಗಿಲೆತ್ತರದಲ್ಲಿ ಹಾರಿಸಲಾಯಿತು. ಸುಮಾರು 15,000 ನಾಣ್ಯಗಳನ್ನು ಬಳಸಿ ತಯಾರಿಸಿದ ಬೃಹತ್ ಹಾರ ಜನರ ಗಮನ ಸೆಳೆಯಿತು.
Last Updated : Feb 3, 2023, 8:37 PM IST