ಮಳೆಯ ನಡುವೆಯೂ ಕುಕ್ಕೆಯಲ್ಲಿ ಅದ್ಧೂರಿ ಪಂಚಮಿ ರಥೋತ್ಸವ - ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ
ಸುಬ್ರಮಣ್ಯ: ನಾಡಿನ ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಪಂಚಮಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಪಂಚಮಿಯ ದಿನ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ, ಬಲಿ ಸೇವೆ ನಡೆದಿದೆ. ನಂತರ ಅತ್ಯಂತ ವೈಭವದಿಂದ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವವಾಯಿತು. ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ವಿವಿಧ ಫಲಪುಷ್ಪದಿಂದ ಅಲಂಕರಿಸಿ ಆನೆ ಅಂಬಾರಿಗಳೊಂದಿಗೆ ದೇವಳದ ರಥಬೀದಿಯಲ್ಲಿ ಎಳೆಯಲಾಯಿತು. ಧಾರಾಕಾರ ಮಳೆಯ ನಡುವೆಯೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
Last Updated : Feb 3, 2023, 8:33 PM IST