ಕರ್ನಾಟಕ

karnataka

ರಂಗೋಲಿ ಸ್ಪರ್ಧೆ

ETV Bharat / videos

ಅಂಬಾವಿಲಾಸ ಅರಮನೆ ಮುಂಭಾಗದ ಆವರಣದಲ್ಲಿ ರಂಗೋಲಿ ಸ್ಪರ್ಧೆ- ವಿಡಿಯೋ ನೋಡಿ - ಮೈಸೂರು

By ETV Bharat Karnataka Team

Published : Oct 16, 2023, 9:16 PM IST

ಮೈಸೂರು:ಪ್ರಸಿದ್ಧಅಂಬಾವಿಲಾಸ ಅರಮನೆ ಮುಂಭಾಗದ ಆವರಣದಲ್ಲಿ ಇಂದು ರಂಗೋಲಿ ಸ್ಪರ್ಧೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಉಪ ಸಮಿತಿ ಎಲ್ಲಾ ವರ್ಗದ ಮಹಿಳೆಯರಿಗಾಗಿ ಸ್ಪರ್ಧೆ ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಪಾಲ್ಗೊಂಡು ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸಂಭ್ರಮಿಸಿದರು.

ಮುಂಜಾನೆ 6 ಗಂಟೆಯಿಂದಲೇ ರಂಗೋಲಿ ಸ್ಪರ್ಧೆಗಾಗಿ ಅರಮನೆ ಆವರಣದಲ್ಲಿ ಮಹಿಳೆಯರು ಸೇರಿದ್ದರು. 8.20ಕ್ಕೆ ಸ್ಪರ್ಧೆ ಆರಂಭವಾಯಿತು. ಹಾಸನ, ದಾವಣಗೆರೆ, ಚಾಮರಾಜನಗರ ಸೇರಿದಂತೆ ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಮಹಿಳೆಯರು ಆಗಮಿಸಿದ್ದರು.

ಶ್ರೀ ಚಾಮುಂಡೇಶ್ವರಿ ದೇವಿ, ಆನೆ, ನವಿಲು, ಮಹಿಳೆ, ರೈತ, ವಿಶೇಷವಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿಗಳು ಸೇರಿದಂತೆ ವಿವಿಧ ವಿನ್ಯಾಸಗಳ ಚಿತ್ತಾರ ಮೂಡಿಬಂದಿತ್ತು. 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಮೂರು ಬಹುಮಾನ, ಮೂರು ಸಮಾಧಾನಕರ ಬಹುಮಾನ ಮತ್ತು ಭಾಗವಹಿಸಿದವರೆಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಈ ಬಹುಮಾನವನ್ನು ಅ.20 ರಂದು ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಹುಣಸೂರು ಉಪವಿಭಾಗಧಿಕಾರಿ ರುಚಿ ಬಿಂದಾಲ್ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಬಸವರಾಜು ಇದ್ದರು.

ಇದನ್ನೂ ಓದಿ:ಶ್ರೀರಂಗಪಟ್ಟಣದಲ್ಲಿ ಅದ್ಧೂರಿ ದಸರಾ ಜಂಬೂಸವಾರಿ: ವಿಡಿಯೋ ನೋಡಿ

ABOUT THE AUTHOR

...view details