ಪೂರ್ಣಿಯಾದಲ್ಲಿ ಪಾಕಿಸ್ತಾನದ ಧ್ವಜಾರೋಹಣ ಮಾಡಿದ ಆರೋಪ ಸುಳ್ಳು, ವದಂತಿ ಹಬ್ಬಿಸಿದವರು ಯಾರು? - ಪಾಕಿಸ್ತಾನದ ಧ್ವಜ
ಪೂರ್ಣಿಯಾ (ಬಿಹಾರ):74ನೇ ಗಣರಾಜ್ಯೋತ್ಸವ ದಿನವಾದ ಇಂದು ಇಲ್ಲಿಯ ಮಧುಬನಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಪಾಹಿ ತೋಲಾ ಎಂಬ ಗ್ರಾಮದ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿರುವ ಘಟನೆ ನಡೆದಿದೆ ಎಂದು ವರದಿಯಾಗಿತ್ತು. ಆದರೆ ಈಗ ಅದು ಸುಳ್ಳು ಎಂದು ಪೊಲೀಸರು ತಿಳಿಸಿದ್ದಾರೆ. ಇದೊಂದು ಧಾರ್ಮಿಕ ಧ್ವಜ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 26ರಂದು ಇಂತಹದೊಂದು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಕೂಡಲೇ ಮನೆಯು ಮೇಲೆ ಹಾರಿಸಲಾಗಿದ್ದ ಧ್ವಜವನ್ನು ತೆಗೆಸಿದ್ದರು. ಅಲ್ಲದೇ ಘಟನೆಯ ಬಗ್ಗೆ ತನಿಖೆ ಕೈಗೊಂಡಿದ್ದರು.
ಪೊಲೀಸರ ತನಿಖೆ ವೇಳೆ, ಪಾಕಿಸ್ತಾನಿ ಧ್ವಜ ಎಂದು ಹೇಳಲಾಗಿದ್ದರೂ ಅದು ವಾಸ್ತವವಾಗಿ ಧಾರ್ಮಿಕ ಧ್ವಜ ಎಂದು ಪೊಲೀಸರ ತನಿಖೆಯಲ್ಲಿ ಕಂಡು ಬಂದಿದೆ. ಪೂರ್ಣಿಯಾ ಪೊಲೀಸರು ಈ ಸಂಬಂಧ ಟ್ವೀಟ್ ಕೂಡಾ ಮಾಡಿ ಸ್ಪಷ್ಟನೆ ನೀಡಿದ್ದಾರೆ. ’’ಜನವರಿ 26 ರಂದು ಸಂಜೆ 5:30 ಕ್ಕೆ ಮಧುಬನಿ ಟಾಪ್ ಪ್ರದೇಶದ ಸಿಪಾಹಿ ಟೋಲಾದಲ್ಲಿ ವ್ಯಕ್ತಿಯೊಬ್ಬರು ತಮ್ಮ ಚಾವಣಿಯ ಮೇಲೆ ಬೇರೊಂದು ದೇಶದ ಧ್ವಜವನ್ನು ಹಾರಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ನಂತರ ಮಾಹಿತಿಯನ್ನು ಪರಿಶೀಲಿಸಲಾಯಿತು. ಈ ಧ್ವಜವು ಧಾರ್ಮಿಕ ಧ್ವಜವಾಗಿದ್ದು, ಸುಮಾರು ಒಂದು ತಿಂಗಳಿನಿಂದ ಅಲ್ಲಿ ಹಾರಿಸಲಾಗಿತ್ತು ಎಂದು ತನಿಖೆಯಲ್ಲಿ ಕಂಡುಬಂದಿದೆ’’ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವದ ವೇಳೆ ಅಲ್ಲಾ-ಹು-ಅಕ್ಬರ್ ಘೋಷಣೆ(ಅಲಿಗಢ):ಮತ್ತೊಂದು ಕಡೆ ಅವತ್ತೇಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿಂದು ಗಣರಾಜ್ಯೋತ್ಸವದ ಕಾರ್ಯಕ್ರಮದ ವೇಳೆ ಎನ್ಸಿಸಿಯ ಕೆಲ ವಿದ್ಯಾರ್ಥಿಗಳು ನಾರಾ-ಎ-ತಕ್ಬೀರ್ ಮತ್ತು ಅಲ್ಲಾ-ಹು-ಅಕ್ಬರ್ ಎಂಬ ಘೋಷಣೆಗಳನ್ನು ಕೂಗಿರುವ ಘಟನೆ ನಡೆದಿದೆ. 74ನೇ ಗಣರಾಜ್ಯೋತ್ಸವ ನಿಮಿತ್ತ ಇಂದು ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಲ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೇ ಘೋಷಣೆ ಕೂಗಿರವವರ ದೃಶ್ಯಗಳು ಸೆರೆಯಾಗಿದ್ದು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಕಾಲೇಜು ಮಂಡಳಿ ತಿಳಿಸಿದೆ.
ಇದನ್ನೂ ಓದಿ:ಅಟ್ಟಾರಿ ವಾಘಾ ಗಡಿಯಲ್ಲಿ ಗಣರಾಜ್ಯೋತ್ಸವ ಆಚರಣೆ.. ಪಾಕ್ ಯೋಧರಿಗೆ ಸಿಹಿ ಹಂಚಿದ ಭಾರತ ಭದ್ರತಾ ಪಡೆ..