ಕರ್ನಾಟಕ

karnataka

ಮಂಜಮ್ಮ ಜೋಗತಿ ಮತದಾನ

ETV Bharat / videos

ಮತ ಹಕ್ಕು ಚಲಾಯಿಸಿದ ಮಂಜಮ್ಮ ಜೋಗತಿ - Manjamma Jogati

By

Published : May 10, 2023, 1:31 PM IST

ವಿಜಯನಗರ: ರಾಜ್ಯದಲ್ಲಿ ಇಂದು ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ರಾಜ್ಯ ಚುನಾವಣಾ ಆಯೋಗದ ರಾಯಭಾರಿ, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಇಂದು ಬೆಳಗ್ಗೆ ಮತದಾನ ಮಾಡಿದರು. 

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ‌ ಮರಿಯಮ್ಮನಹಳ್ಳಿ ಪಟ್ಟಣದ 60ನೇ ಮತಗಟ್ಟೆಯಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ತಮ್ಮ ಹಕ್ಕು ಚಲಾಯಿಸಿದರು. ಮರಿಯಮ್ಮನಹಳ್ಳಿ ಹೊಸಪೇಟೆ ತಾಲೂಕು ಆದರೂ ಅದು ಸದ್ಯ ಹಗರಿಬೊಮ್ಮನಹಳ್ಳಿ‌ ಕ್ಷೇತ್ರದಲ್ಲಿದೆ.

ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, "ಚುನಾವಣೆ ಅಂದ್ರೆ ಭಾರತ ದೇಶದ ಬಹುದೊಡ್ಡ ಹಬ್ಬ ಅಂತ ನಾನು ಭಾವಿಸಿದ್ದೇನೆ. ಪ್ರತಿಯೊಬ್ಬರು ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ. ಹಾಗೂ ಹೆಚ್ಚಿನ‌ ಸಂಖ್ಯೆಯಲ್ಲಿ ನಮ್ಮ ತೃತೀಯ ಲಿಂಗಿಗಳು ಚುನಾವಣೆಯಲ್ಲಿ ಭಾಗವಹಿಸಿ. ರಾಜ್ಯದ ಪ್ರತಿಯೊಬ್ಬ ಯುವಕ ಮತ್ತು ಯುವತಿಯರು ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಿ" ಎಂದು ಮಂಜಮ್ಮ ಜೋಗತಿ ಅವರು ಮನವಿ ಮಾಡಿದರು.

ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ ಪ್ರಿಯಾಂಕ್​ ಖರ್ಗೆ

ABOUT THE AUTHOR

...view details