ಹೃದಯಾಘಾತದಿಂದ ಎತ್ತು ಸಾವು: ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ಮಾಡಿದ ರೈತ
ಎತ್ತಿಗೆ ಶಾಸ್ತ್ರೋಕ್ತ ಅಂತ್ಯಕ್ರಿಯೆ ನೆರವೇರಿಸಿದ ರೈತ- ವಿಡಿಯೋ - kannada top news
ಹುಬ್ಬಳ್ಳಿ :ಹುಬ್ಬಳ್ಳಿ ತಾಲ್ಲೂಕಿನ ಉಮಚಗಿ ಗ್ರಾಮದ ದ್ಯಾಮಣ್ಣ ಸುಂಕದ ಎಂಬ ರೈತ ತಿಂಗಳ ಹಿಂದೆ ಸಾಲ ಮಾಡಿ 3.50 ಲಕ್ಷ ರೂಪಾಯಿ ಕೊಟ್ಟು ಎರಡು ಜೋಡೆತ್ತು ಖರೀದಿಸಿದ್ದರು. ಹೀಗೆ ತಂದ ಜೋಡೆತ್ತುಗಳಲ್ಲಿ ಒಂದು ಹೃದಯಾಘಾತದಿಂದ ಮೃತಪಟ್ಟಿದೆ. ಪ್ರೀತಿಯಿಂದ ತಂದ ಎತ್ತು ಮೃತಪಟ್ಟಿದ್ದು, ರೈತ ದ್ಯಾಮಣ್ಣ ಎತ್ತಿನ ಕಳೇಬರವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಶಾಸ್ತ್ರೋಕ್ತ ರೀತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಇದನ್ನೂ ಓದಿ:ಬಾಲಕಿಯ ಹೊಟ್ಟೆಯಿಂದ ಒಂದು ಕೆಜಿಗೂ ಅಧಿಕ ಕೂದಲು ಹೊರತೆಗೆದ ವೈದ್ಯರು
Last Updated : Feb 3, 2023, 8:40 PM IST