ಚಿನ್ನದಂಗಡಿಗೆ ಬಂದ ಬಾಲಕಿಯೊಂದಿಗೆ ಮಾಲೀಕನ ಅಸಭ್ಯ ವರ್ತನೆ: ಮಾಲೀಕನಿಗೆ ಥಳಿಸಿದ ತಾಯಿ - Chikkamagaluru Crime News
Published : Oct 17, 2023, 8:04 PM IST
ಚಿಕ್ಕಮಗಳೂರು: ಚಿನ್ನದಂಗಡಿಗೆ ಬರುವ ಮಹಿಳೆಯರು ಹಾಗೂ ಅಪ್ರಾಪ್ತೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಚಿನ್ನದಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ನಡೆದಿದೆ. ತನ್ನ ಅಂಗಡಿಗೆ ಬರುವವರೊಂದಿಗೆ ಕೆಟ್ಟ ವರ್ತನೆ ತೋರುತ್ತಿದ್ದ ಚಿನ್ನದ ವ್ಯಾಪಾರಿಗೆ ಧರ್ಮದೇಟು ಬಿದ್ದಿದೆ. ಬಾಲಕಿಯ ತಾಯಿ ಸೇರಿದಂತೆ ಸಾರ್ವಜನಿಕರು ಮನಸೋಇಚ್ಛೆ ಥಳಿಸಿದ್ದಾರೆ.
ಈ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತಾಯಿ ಹಾಗೂ ಮಗಳು ಸೇರಿ ಅಂಗಡಿ ಮಾಲೀಕನಿಗೆ ಥಳಿಸುತ್ತಿರುವುದು ದಾಖಲಾಗಿದೆ. ಮಾತ್ರವಲ್ಲದೇ ಸಾರ್ವಜನಿಕರು ಕೂಡ ಅಂಗಡಿ ಮಾಲೀಕನಿಗೆ ಮನಬಂದಂತೆ ಹಲ್ಲೆ ಮಾಡುತ್ತಿರುವುದು ಸೆರೆಯಾಗಿದೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಚಿನ್ನದ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಪೂಜೆಯ ಹೆಸರಲ್ಲಿ ಗೃಹಿಣಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ.. ಮಹಾರಾಷ್ಟ್ರಕ್ಕೆ ಪರಾರಿಯಾದ ನಕಲಿ ಬಾಬಾ