ಕರ್ನಾಟಕ

karnataka

ಖಗಾರಿಯಾ ಸೇತುವೆ ಕುಸಿತ

ETV Bharat / videos

ಖಗಾರಿಯಾ ಸೇತುವೆ ಕುಸಿತ.. ಎನ್​ಹೆಚ್​ಎಐ ಅಧಿಕಾರಿಗಳಿಂದ ಪರಿಶೀಲನೆ - ಕಿಶನ್‌ಗಂಜ್ ಮತ್ತು ಪುರ್ನಿಯಾದಲ್ಲಿ ಸೇತುವೆ

By

Published : Jul 20, 2023, 7:40 PM IST

ಖಗಾರಿಯಾ (ಬಿಹಾರ) : ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 10 ಸೇತುವೆಗಳು ಕುಸಿದಿದ್ದು, ಇದೀಗ ಮತ್ತೆ ಖಗಾರಿಯಾದಲ್ಲಿನ ಎನ್‌ಎಚ್ 31 ರ ಬುಧಿ ಗಂಡಕ್ ನದಿಯ ಚತುಷ್ಪಥ ರಸ್ತೆಯಲ್ಲಿರುವ ಸೇತುವೆಯ ಒಂದು ಭಾಗವು ಹಾನಿಗೊಳಗಾಗಿದೆ. ಸೇತುವೆ ಹಾಳಾಗಿರುವ ಬಗ್ಗೆ ಸ್ಥಳೀಯರು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಪ್ರಾಧಿಕಾರದ ಸಿಬ್ಬಂದಿ ಸ್ಥಳಕ್ಕೆ ತಲುಪಿ ಸೇತುವೆಯನ್ನು ಪರಿಶೀಲಿಸುತ್ತಿದ್ದಾರೆ. 

ಗಂಡಕ್ ನದಿಗೆ ನಿರ್ಮಿಸಿದ ಸೇತುವೆ ಹಾನಿ :ಹಾನಿಗೊಳಗಾದ ಸೇತುವೆಗೆ ಸಮಾನಾಂತರವಾಗಿ ಇನ್ನೊಂದು ಮಾರ್ಗದಲ್ಲಿ ಸೇತುವೆ ನಿರ್ಮಿಸಲಾಗಿದೆ. ಎರಡನೇ ಲೇನ್ ಸೇತುವೆ ಮೂಲಕ ಸಂಚರಿಸುವಂತೆ ಜನರಿಗೆ ಮನವಿಯನ್ನೂ ಮಾಡಲಾಗಿದೆ. ಸದ್ಯ ಸೇತುವೆಯ ಒಡೆದ ಭಾಗದ ತನಿಖೆ ನಡೆಯುತ್ತಿದ್ದು, ಹಾನಿಗೆ ಕಾರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ.

ಆಗುವನಿ ಘಾಟ್ ಸೇತುವೆ ಜೂನ್‌ನಲ್ಲಿ ಕುಸಿದಿತ್ತು : ಬಿಹಾರದಲ್ಲಿ ನದಿ ಸೇತುವೆಗೆ ಹಾನಿಯಾದ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮುನ್ನ ರಾಜ್ಯದಲ್ಲಿ ಹಲವು ಸೇತುವೆಗಳು ನೆಲಸಮವಾಗಿವೆ. ಜೂನ್ 4 ರಂದು ಭಾಗಲ್ಪುರ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದ್ದ ಆಗುವನಿ ಘಾಟ್ ಸೇತುವೆ ಕುಸಿದಿತ್ತು. ಕಳೆದ ವರ್ಷವೂ ಈ ಸೇತುವೆ ನಿರ್ಮಾಣದ ವೇಳೆ ಒಮ್ಮೆ ಬಿದ್ದಿತ್ತು.

ಸೇತುವೆ ಕುಸಿತದ ಸರಣಿ ಮುಂದುವರಿದಿದೆ : ಬಿಹಾರದಲ್ಲಿ 1710 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಅಗುವಾನಿ ಸೇತುವೆ ಕುಸಿತದಿಂದ ಹಲವು ದಿನಗಳ ಕಾಲ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಬಿಹಾರದ ಭಾಗಲ್ಪುರ್‌ನ ಅಗ್ವಾನಿ ಘಾಟ್ ಸೇತುವೆಯ ನಂತರ, ಕಿಶನ್‌ಗಂಜ್ ಮತ್ತು ಪುರ್ನಿಯಾದಲ್ಲಿ ಸೇತುವೆಗಳು ಸಹ ಕುಸಿದಿದ್ದವು. ಈಗ ಖಗಾರಿಯಾದಲ್ಲಿನ ಸೇತುವೆಯೂ ಹಾನಿಯಾಗಿದೆ. ಸದ್ಯ ಹಾಳಾದ ಸೇತುವೆ ದುರಸ್ತಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಅದನ್ನು ಆದಷ್ಟು ಬೇಗ ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ:ಮಹಾಪ್ರವಾಹಕ್ಕೆ 100 ವರ್ಷ ಹಳೇಯ ಸೇತುವೆಗೆ ಹಾನಿ, ಹತ್ತಾರು ವಾಹನಗಳು ನೀರುಪಾಲು- ವಿಡಿಯೋ

ABOUT THE AUTHOR

...view details