ರಾಜ್‌ಕೋಟ್: ಭಾರಿ ಮಳೆಯಿಂದ ಖಂಡೇರಿ ಕ್ರಿಕೆಟ್ ಸ್ಟೇಡಿಯಂಗೆ ಹಾನಿ - ವಿಡಿಯೋ - ETV Bharat Karnataka
Published : Nov 26, 2023, 10:55 PM IST
ರಾಜ್‌ಕೋಟ್ (ಗುಜರಾತ್) :ಭಾನುವಾರ ಬೆಳಗ್ಗೆಯಿಂದಲೇ ರಾಜ್‌ಕೋಟ್ ನಗರದ ವಿವಿಧೆಡೆ ಅಕಾಲಿಕ ಭಾರೀ ಮಳೆ ಆರಂಭವಾಯಿತು. ಪರಿಣಾಮ ಖಂಡೇರಿ ಕ್ರಿಕೆಟ್ ಸ್ಟೇಡಿಯಂಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಮಳೆಯ ಜತೆಗೆ ಆಲಿಕಲ್ಲು ಬಿದ್ದಿದ್ದು, ಜೋರು ಗಾಳಿ ಮತ್ತು ಮಳೆಯಿಂದಾಗಿ ಹಾನಿ ಸಂಭವಿಸಿದೆ.
ಕ್ರೀಡಾಂಗಣದ ಮೀಡಿಯಾ ಬಾಕ್ಸ್‌ನ ಗಾಜು ಒಡೆದಿದ್ದು, ಎಲಿವೇಶನ್ ಶೀಟ್‌ಗಳೂ ಹಾರಿ ಹೋಗಿವೆ. ಇದೇ ಮೈದಾನದಲ್ಲಿ ಕೂಚ್ ಬೆಹಾರ್ ಟ್ರೋಫಿ ಪಂದ್ಯಾವಳಿ ಆರಂಭವಾಗಿದ್ದು, ಮಳೆಯಿಂದಾಗಿ ಅದು ಕೂಡ ರದ್ದಾಗಿದೆ. ಸುಮಾರು 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಖಂಡೇರಿ ಸ್ಟೇಡಿಯಂ ಅನ್ನು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ನಿರ್ವಹಿಸುತ್ತಿದೆ. ಮಳೆ ಬರುವ ಮುನ್ಸೂಚನೆ ಅಷ್ಟೇ ಇತ್ತು. ಆದರೆ ಜೋರು ಗಾಳಿ ಬೀಸುವ ಮುನ್ಸೂಚನೆ ಇರಲಿಲ್ಲ. ಇದರಿಂದಾಗಿ ಕ್ರೀಡಾಂಗಣ ವ್ಯವಸ್ಥೆ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಳೆಯ ಜೊತೆಗೆ ಜೋರಾದ ಗಾಳಿಯಿಂದ ಹಾನಿಯಾಗಿದೆ ಎಂದು ಮೈದಾನದ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ :ಆಟಗಾರರನ್ನು ಭೇಟಿ ಮಾಡಿ ಧೈರ್ಯ ತುಂಬುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ : ಸೆಹ್ವಾಗ್ ಗುಣಗಾನ