ಹಗಲು ಹೊತ್ತಲ್ಲಿ ಮೊಟ್ಟೆ ಇಡಲು ಬಂದ ಅಪರೂಪದ ಓಲಿವ್ ರಿಡ್ಲೆ ಕಡಲಾಮೆ - ಈಟಿವಿ ಭಾರತ್ ಕನ್ನಡ ಸುದ್ದಿ
ಕಾರವಾರ: ಓಲಿವ್ ರಿಡ್ಲ್ ಪ್ರಬೇಧದ ಕಡಲಾಮೆಯೊಂದು ಹಗಲಿನಲ್ಲೇ ಮೊಟ್ಟೆ ಇಡಲು ಕಡಲತೀರದ ಬಳಿ ಆಗಮಿಸಿದ ಅಪರೂಪದ ಘಟನೆ ತಾಲ್ಲೂಕಿನ ಮುದಗಾದಲ್ಲಿ ನಡೆಯಿತು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ಪ್ರಶಾಂತ, ಕೋಸ್ಟಲ್ ಮರೈನ್ ಸೆಲ್‌ನ ಆರ್‌ಎಫ್‌ಓ ಪ್ರಮೋದ್ ನಾಯಕ ಹಾಗೂ ಸಿಬ್ಬಂದಿ ಆಮೆಯ ಮೊಟ್ಟೆಗಳನ್ನು ರಕ್ಷಿಸಿದರು.
ಓಲಿವ್ ರಿಡ್ಲ್ ಪ್ರಬೇಧದ ಆಮೆಗಳು ನವೆಂಬರ್‌ನಿಂದ ಮಾರ್ಚ್‌ವರೆಗೆ ಮೊಟ್ಟೆ ಇಡುತ್ತವೆ. ಸಾಮಾನ್ಯವಾಗಿ ಇವು ರಾತ್ರಿ ವೇಳೆ ಮಾತ್ರ ಕಡಲತೀರಕ್ಕೆ ಆಗಮಿಸಿ ಮೊಟ್ಟೆಯಿಟ್ಟು ತೆರಳುತ್ತಿದ್ದವು. ಆದರೆ ಅಪರೂಪ ಎನ್ನುವಂತೆ ಹಗಲಿನಲ್ಲೇ ಮೊಟ್ಟೆ ಇಟ್ಟಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ :ಮಲ್ಪೆ ಮೀನುಗಾರರ ಬಲೆಗೆ ಬಿದ್ದ 16 ಕೆಜಿ ತೂಕದ ಬಂಗಾರ ಬಣ್ಣದ ಮೀನು- ವಿಡಿಯೋ