ಕರ್ನಾಟಕ

karnataka

ನಾಪತ್ತೆಯಾಗಿರುವ ವೃದ್ಧೆ ಪ್ರಮೀಳಾ ದೇವಿ

ETV Bharat / videos

ಮರೆವಿ‌ನ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ನಾಪತ್ತೆ: ಕುಟುಂಬಸ್ಥರ ಹುಡುಕಾಟ

By

Published : Feb 1, 2023, 8:08 PM IST

Updated : Feb 3, 2023, 8:39 PM IST

ಬೆಂಗಳೂರು:ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಮನೆ ಬಿಟ್ಟು ಹೋಗಿರುವ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ನಡೆದಿದೆ. 62 ವರ್ಷದ ಪ್ರಮೀಳಾ ದೇವಿ ಕಾಣೆಯಾದವರು. ಜನವರಿ 24 ರ ಮಧ್ಯಾಹ್ನ 1.30ರ ಸುಮಾರಿಗೆ ಇವರು ಮನೆಯಿಂದ ಹೊರಹೋಗಿದ್ದು ಕುಟುಂಬಸ್ಥರ ಆತಂಕ ಹೆಚ್ಚಿಸಿದೆ.

ಮೂಲತಃ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಪ್ರಮೀಳಾದೇವಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದವರು. ನಾಲ್ಕು ವರ್ಷದಿಂದ ನಿಧಾನವಾಗಿ ಮರೆವಿನ ಖಾಯಿಲೆಗೆ ತುತ್ತಾಗಿದ್ದು ರಾಮಮೂರ್ತಿ ನಗರದಲ್ಲಿರುವ ಪುತ್ರಿಯ ಮನೆಯಲ್ಲಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜನವರಿ 24ರಂದು ಮನೆಯಿಂದ ಹೊರಟು ಹೋಗಿದ್ದು, ಇದೀಗ ನಾಪತ್ತೆಯಾಗಿದ್ದಾರೆ. ಮನೆಯಿಂದ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕುಟುಂಬಸ್ಥರು 4 ಸಾವಿರ ಕರಪತ್ರ ಮಾಡಿಸಿ ಹಂಚುವ ಮೂಲಕ ಹುಡುಕಾಟದಲ್ಲಿ ತೊಡಗಿದ್ದಾರೆ. ರಾಮಮೂರ್ತಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ:ರಾಮನಗರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಡತ ನಾಪತ್ತೆ

Last Updated : Feb 3, 2023, 8:39 PM IST

ABOUT THE AUTHOR

...view details