ಕಟ್ಟೆ ಮೇಲೆ ಕುಳಿತು ನಿದ್ರಿಸಿ ಬಾವಿಗೆ ಬಿದ್ದು ವ್ಯಕ್ತಿ ಸಾವು: ಮಂಗಳೂರಿನಲ್ಲಿ ನಡೆದ ಘಟನೆ- ವಿಡಿಯೋ - etv bharat kannada
ಉಳ್ಳಾಲ (ದಕ್ಷಿಣ ಕನ್ನಡ):ನಿದ್ರೆ ಮಂಪರಿನಲ್ಲಿದ್ದ ವೃದ್ಧರೊಬ್ಬರು ಬಾವಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಘಟನೆಯ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ (65) ಮೃತರೆಂದು ಗೊತ್ತಾಗಿದೆ.
ವಾಲ್ಟರ್ ಮೊಂತೆರೋ ಶನಿವಾರ ಸಂಜೆ ತೊಕ್ಕೊಟ್ಟಿನ ಚರ್ಚ್ಗೆ ತೆರಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ್ದರು. ರಾತ್ರಿ 7.23ರ ಸಮಯಕ್ಕೆ ವಾಲ್ಟರ್ ತಮ್ಮ ಮನೆಯಂಗಳದ ಬಾವಿಯ ಕಟ್ಟೆಯಲ್ಲಿ ಕುಳಿತು ನಿದ್ರೆಗೆ ಜಾರಿದ್ದರು. ಆಯತಪ್ಪಿ ಬಾವಿಗೆ ಬಿದ್ದ ತಕ್ಷಣವೇ ಮನೆ ಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನ ಮೇಲಕ್ಕೆತ್ತಿದ್ದರು. ಆದರೆ ತಲೆಗೆ ಗಂಭೀರ ಸ್ವರೂಪದ ಗಾಯವಾದ ಕಾರಣ ಅವರು ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯಾವಳಿ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣವಾಗಿ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಇದನ್ನು ಓದಿ:ಶೆಟ್ಟರ್, ಸವದಿಯಿಂದ ಪಕ್ಷಕ್ಕೆ ದ್ರೋಹ.. ರಾಜ್ಯ ಪ್ರವಾಸ ಮಾಡಿ ಇವರ ಬಂಡವಾಳ ಬಯಲು ಮಾಡುವೆ: ಬಿಎಸ್ವೈ