ಲಾರಿ 70 ಟನ್ ಭಾರ ಹೊತ್ತು ಸಾಗುತ್ತಿದ್ದಾಗ ದಿಢೀರ್ ಕುಸಿದು ಬಿದ್ದ ಬ್ರಿಟಿಷ್ ಕಾಲದ ಸೇತುವೆ- ವಿಡಿಯೋ - ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರಂ
ಶ್ರೀಕಾಕುಳಂ(ಆಂಧ್ರಪ್ರದೇಶ): ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರಂನಲ್ಲಿ ಬಹುದಾ ನದಿಗೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಹಳೆಯ ಐತಿಹಾಸಿಕ ಸೇತುವೆ ಕುಸಿದಿದೆ. ಇಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ ಲಾರಿಯೊಂದು 70 ಟನ್ ಭಾರದ ಕಲ್ಲು ಹೊತ್ತೊಯ್ಯುತ್ತಿದ್ದಾಗ ಸೇತುವೆ ದಿಢೀರ್ ಕುಸಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಿಂದಾಗಿ ಲಾರಿ ಸಂಪೂರ್ಣ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸೇತುವೆ ಕುಸಿದು ಬಿದ್ದಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಇದನ್ನೂ ಓದಿ:ಮೋರ್ಬಿ ಸೇತುವೆ ದುರಂತದಲ್ಲಿ 12 ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ
ಬಹುದಾ ನದಿಗೆ 1929ರಲ್ಲಿ ನಿರ್ಮಿಸಲಾದ ಈ ಸೇತುವೆ ಇಚ್ಛಾಪುರಂ ಪಟ್ಟಣವನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಸೇತುವೆ ಕುಸಿತದಿಂದ ಸಂಚಾರ ಅಸ್ತವ್ಯಸ್ತವಾಗುವ ಉಂಟಾಗುವ ಸಾಧ್ಯತೆ ಇದೆ. ಸೇತುವೆಯ ದುಸ್ಥಿತಿಯ ಬಗ್ಗೆ ಸ್ಥಳೀಯರು ಈ ಹಿಂದೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ನಿರ್ಲಕ್ಷ್ಯ ವಹಿಸಿದ್ದರು ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನೂ ಓದಿ:ಮೋರ್ಬಿ ದುರಂತ.. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ: ಗುಜರಾತ್ ಹೈಕೋರ್ಟ್ ಆದೇಶ