ವಿಡಿಯೋ: ಸೆಲ್ಫಿಗಾಗಿ ರೂಲ್ಸ್ ಬ್ರೇಕ್ ಮಾಡಿದ ಯುವಕರು.. ಅಧಿಕಾರಿಯಿಂದ ಕಪಾಳಮೋಕ್ಷ - ಕೊಪ್ಪಳದಲ್ಲಿ ಸೆಲ್ಫಿಗಾಗಿ ಬೇಲಿ ಹಾರಿದ ಯುವಕರು
ಕೊಪ್ಪಳ: ತುಂಗಾಭದ್ರಾ ಜಲಾಶಯದ ಅಣತಿ ದೂರದಲ್ಲಿರುವ ನಿಷೇದಿತ ಸೇತುವೆ ಮೇಲೆ ಬೇಲಿ ಹಾರಿ ಸೆಲ್ಪಿ ಕ್ಲಿಕ್ಕಿಸಲು ಬಂದ ಯುವಕರಿಗೆ ಅಧಿಕಾರಿ ಕಪಾಳಮೋಕ್ಷ ಮಾಡಿ ಕಳಿಸಿದ ಘಟನೆ ನಡೆದಿದೆ. ತುಂಗಭದ್ರಾ ಜಲಾಶಯದಿಂದ 32 ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಬಿಡಲಾಗಿದ್ದು, ಅಪಾಯದ ಮಟ್ಟ ಮೀರಿ ನದಿ ಹರಿಯುತ್ತಿದೆ. ನದಿ ಪಾತ್ರದ ಸಣ್ಣ ಪುಟ್ಟ ಬ್ರಿಡ್ಜ್ಗಳ ಮೇಲೆ ಜನ ಓಡಾಡಬಾರದೆಂದು ಮುಳ್ಳಿನ ಬೇಲಿ ಹಾಕಲಾಗಿದೆ. ಹೀಗಿದ್ದರೂ ಯುವಕರು ಸೆಲ್ಫಿಗಾಗಿ ನಿಷೇಧಿತ ಪ್ರದೇಶಗಳಿಗೆ ನುಗ್ಗುತ್ತಿದ್ದಾರೆ. ಅಪಾಯ ಅರಿತ ಅಧಿಕಾರಿಗಳು ನದಿ ಪಾತ್ರದುದ್ದಕ್ಕೂ ಕಟ್ಟೆಚ್ಚರ ವಹಿಸಿದ್ದಾರೆ.
Last Updated : Feb 3, 2023, 8:24 PM IST