ಕರ್ನಾಟಕ

karnataka

ಕಿರುಬ ಬೆಕ್ಕು

ETV Bharat / videos

ಬೆಳಗಾವಿಯಲ್ಲಿ ಪತ್ತೆಯಾಗಿದ್ದು ಚಿರತೆಯಲ್ಲ, ಕಿರುಬ ಬೆಕ್ಕು: ನಿಟ್ಟುಸಿರು ಬಿಟ್ಟ ಜನ - ಟ್ರ್ಯಾಪ್ ಕ್ಯಾಮರಾ

By

Published : Aug 10, 2023, 2:13 PM IST

ಬೆಳಗಾವಿ : ಮೂಡಲಗಿಯ ಖಾನಟ್ಟಿ - ಶಿವಾಪುರ ಭಾಗದಲ್ಲಿ ಚಿರತೆ ಪ್ರತ್ಯಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಸಿಕ್ಕದ್ದು ಚಿರತೆಯಲ್ಲ, ಅದು ಕಿರುಬ ಬೆಕ್ಕು ಎಂಬುದು ಸ್ಪಷ್ಟವಾಗಿದೆ. ಚಿರತೆ ಪ್ರತ್ಯಕ್ಷ ವದಂತಿ ಬೆನ್ನಲ್ಲೇ ಮೂಡಲಗಿ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ಟ್ರ್ಯಾಪ್ ಕ್ಯಾಮರಾ ಅಳವಡಿಕೆ ಮಾಡಿದ್ದರು. ಆದರೆ, ಇದೀಗ ಚಿರತೆ ಬದಲು ಟ್ರ್ಯಾಪ್ ಕ್ಯಾಮರಾ ಕಣ್ಣಿಗೆ ಬಿದ್ದಿರುವುದು ಕಿರುಬ ಬೆಕ್ಕು ಅನ್ನೋದು ಸಾಬೀತಾಗಿದೆ.

ಕಳೆದ ಎರಡು ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆಯ ವಿಡಿಯೋ ವೈರಲ್ ಆಗಿತ್ತು. ಇದರಿಂದ ಖಾನಟ್ಟಿ-ಶಿವಾಪುರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಖಾನಟ್ಟಿ-ಶಿವಾಪುರ ಭಾಗದಲ್ಲಿ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿತ್ತು. ಸದ್ಯಕ್ಕೆ ಅದು ಚಿರತೆಯಲ್ಲ, ಕಿರುಬ ಬೆಕ್ಕು ಎಂದು ತಿಳಿದು ಬಂದಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಚಿರತೆ ದಾಳಿಗೆ ರೈತ ಮಹಿಳೆ ಬಲಿ : ಮತ್ತೊಂದೆಡೆ ಹೊಲದಲ್ಲಿ ಕೆಲಸ‌ ಮಾಡುತ್ತಿದ್ದ ರೈತ ಮಹಿಳೆ ಮೇಲೆ ಚಿರತೆಯೊಂದು ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ಕಳೆದ 2 ದಿನಗಳ ಹಿಂದಷ್ಟೇ ಶಿವಮೊಗ್ಗ ತಾಲೂಕು ಬಿಕ್ಕೋನಹಳ್ಳಿ ಗ್ರಾಮದಲ್ಲಿ‌ ನಡೆದಿತ್ತು. ಯಶೋದಮ್ಮ(45) ಚಿರತೆ ದಾಳಿಯಿಂದ ಸಾವನ್ನಪ್ಪಿದ‌ವರು. ಮೃತ ರೈತ ಮಹಿಳೆ ಕೂಲಿ‌ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸಕ್ಕೆಂದು ಹೊಲಕ್ಕೆ ಹೋದಾಗ ಘಟನೆ ಸಂಭವಿಸಿತ್ತು. 

ಇದನ್ನೂ ಓದಿ :ಶಿವಮೊಗ್ಗದಲ್ಲಿ ಚಿರತೆ ದಾಳಿಗೆ ರೈತ ಮಹಿಳೆ ಬಲಿ.. ಜನರಲ್ಲಿ ಹೆಚ್ಚಿದ ಆತಂಕ

ABOUT THE AUTHOR

...view details