ಹಾವುಗಳ ರಕ್ಷಣೆಗೆ ಬಂತು ಸರ್ಪ ಆ್ಯಪ್: ಬಳಕೆ ಹೇಗೆ ಗೊತ್ತಾ? - ಈಟಿವಿ ಭಾರತ್ ಕನ್ನಡ
ಮಲಪ್ಪುರಂ (ಕೇರಳ): ಕೇರಳ ಸರ್ಕಾರದ ಅರಣ್ಯ ಇಲಾಖೆಯು ಹಾವುಗಳನ್ನು ರಕ್ಷಣೆ ಮಾಡಲು 'ಸರ್ಪ' ಆ್ಯಪ್ ನ್ನು ಪರಿಚಯಿಸಿದೆ. ಯಾರಾದರೂ ತಮ್ಮ ಪ್ರದೇಶದಲ್ಲಿ ಹಾವುಗಳನ್ನು ಕಂಡರೆ, ಹಾವಿನ ಚಿತ್ರವನ್ನು ತೆಗೆದು ಅದನ್ನು ಆಪ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ನಂತರ ಸಮೀಪದ ಪ್ರದೇಶದಲ್ಲಿನ ಉರಗ ರಕ್ಷಕರು ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಿಸುವ ಕಾರ್ಯ ಮಾಡುತ್ತಾರೆ. ಜನರು ಭಯದಿಂದ ಹಾವುಗಳನ್ನು ಕೊಲ್ಲುವುದನ್ನು ತಡೆಯಲು ಮತ್ತು ವಿವಿಧ ವಿಷಕಾರಿ ಹಾವುಗಳು, ಹಾವಿನ ಕಡಿತದ ಪ್ರಥಮ ಚಿಕಿತ್ಸೆಯ ಬಗ್ಗೆ ಜನರಿಗೆ ತಿಳಿಸಲು ಈ ಆ್ಯಪ್ ಸಹಾಯ ಮಾಡುತ್ತದೆ. ಇನ್ನು ಈ ಆ್ಯಪ್ ಉರಗ ರಕ್ಷಕರ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಹೊಂದಿದೆ. ಈ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಮತ್ತು ಉರಗ ರಕ್ಷಣೆಗೆ ವಿನಂತಿಸಬಹುದು.' ಸರ್ಪ' ಮೊಬೈಲ್ ಆ್ಯಪ್ನ್ನು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
Last Updated : Feb 3, 2023, 8:31 PM IST