ನಿಕಿತಾ ಅನುಮಾನಾಸ್ಪದ ಸಾವು ಪ್ರಕರಣ: ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ - ಸೂಕ್ತ ತನಿಖೆಗಾಗಿ ಎಬಿವಿಪಿ ಪ್ರತಿಭಟನೆ
ಉಡುಪಿ:ವಿದ್ಯಾರ್ಥಿನಿ ನಿಕಿತಾ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ಸಂಘಟನೆಯು ನಗರದಲ್ಲಿರುವ ಸಿಟಿ ಆಸ್ಪತ್ರೆಗೆ ಮುತ್ತಿಗೆ ಹಾಕಲು ಯತ್ನಿಸಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ರಸ್ತೆಯಲ್ಲೇ ತಡೆದು ನಿಲ್ಲಿಸಿದರು. ಈ ವೇಳೆ, ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಕೆಲವು ಸಮಯಗಳ ಕಾಲ ವಾಗ್ವಾದ ನಡೆಯಿತು. 'ನಿಕಿತಾ ಸಾವಿಗೆ ಸಿಟಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ. ಸೂಕ್ತ ತನಿಖೆ ನಡೆಸುವಂತೆ ಘೋಷಣೆ ಕೂಗಿ ಆಗ್ರಹಿಸಿದರು'.
ಪ್ರತಿಭಟನಾ ಸ್ಥಳಕ್ಕೆ ಬಂದ ಆಸ್ಪತ್ರೆಯ ವೈದ್ಯ ರಾಮಚಂದ್ರ, 'ವಿದ್ಯಾರ್ಥಿನಿಯ ಸಾವಿಗೆ ನಮ್ಮ ನಿರ್ಲಕ್ಷ್ಯ ಕಾರಣವಲ್ಲ ಎಂದು ಕೆಲವು ವೈದ್ಯಕೀಯ ಕಾರಣಗಳನ್ನು ನೀಡಿದರು'. ಕಳೆದ ಭಾನುವಾರ ಬೆಳಗ್ಗೆ ನಗರದ ಸಿಟಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ನಿಕಿತಾ ಮೃತಪಟ್ಟಿದ್ದರು. ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಮೃತ ನಿಕಿತಾ ಪೋಷಕರು ಆರೋಪ ಮಾಡಿದ್ದರು. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತು. ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲಿ ನಿವಾಸಿಯ ನಿಕಿತಾ, ಉಡುಪಿಯಲ್ಲಿ ಓದುತ್ತಿದ್ದರು.
ಇದನ್ನೂ ಓದಿ:ಶ್ರವಣಬೆಳಗೊಳ: ತೆಂಗಿನಕಾಯಿ ಗೊನೆ ತಲೆ ಮೇಲೆ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು