ಹೊಸ ವರ್ಷದ ಸಂಭ್ರಮಾಚರಣೆ.. ಮೈಸೂರಿನ ಪ್ರವಾಸಿ ತಾಣಗಳಲ್ಲಿ ಜನವೋ ಜನ - ETv Bharat Kannada News
ಮೈಸೂರು: ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ, ಮೈಸೂರಿನ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಜನಸಾಗರವೇ ತುಂಬಿದೆ. ಭಾನುವಾರದಿಂದಲೇ ವರ್ಷದ ಆರಂಭವಾಗಿರುವುದರಿಂದ, ರಜೆ ಮೂಡಿನಲ್ಲಿ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡಿದ್ದಾರೆ. ಅರಮನೆ, ಮೃಗಾಲಯ, ಕಾರಂಜಿಕೆರೆ, ಸಂತಫಿಲೋಮಿನಾ ಚರ್ಚ್, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಧಾರ್ಮಿಕ ಸ್ಥಳಗಳಾದ ಚಾಮುಂಡಿಬೆಟ್ಟ, ನಂಜನಗೂಡಿನ ನಂಜುಂಡೇಶ್ವರ, ತಲಕಾಡಿನ ಸೋಮೇಶ್ವರ ದೇವಾಲಯ ಸೇರಿದಂತೆ ಪ್ರವಾಸಿತಾಣಗಳಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಅರಮನೆಯಂಗಳದಲ್ಲಿ ಆಯೋಜಿಸಿರುವ ಮಾಗಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಪ್ರವಾಸಿಗರನ್ನು ತನ್ನತ್ತ ಸೆಳೆಯತ್ತಿದೆ. ಮಾಗಿ ಉತ್ಸವ ಜ.2ರಂದು ಮುಕ್ತಾಯ ಆಗಲಿರುವುದರಿಂದ, ಸ್ಥಳೀಯರು ಕೂಡ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.
Last Updated : Feb 3, 2023, 8:38 PM IST