ನೆಲಮಂಗಲ: ಲಕ್ಷಾಂತರ ಮೌಲ್ಯದ ವಸ್ತು ಕದ್ದೊಯ್ಯುತ್ತಿದ್ದ ಐವರು ಕಳ್ಳರ ಬಂಧನ - ತಾಮ್ರದ ವಯರ್
Published : Dec 20, 2023, 10:59 PM IST
ನೆಲಮಂಗಲ(ಬೆಂಗಳೂರು ಗ್ರಾಮಾಂತರ):ರಾಷ್ಟ್ರೀಯ ಹೆದ್ದಾರಿ ಹಾಗೂ ಕಾರ್ಖಾನೆಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದು ಸೆಕ್ಯುರಿಟಿಗಳ ಮೇಲೆ ಹಲ್ಲೆ ಮಾಡಿ ಲಕ್ಷಾಂತರ ಬೆಲೆಬಾಳುವ ವಸ್ತು ಕದ್ದು ಎಸ್ಕೇಪ್ ಆಗುತ್ತಿದ್ದ 5 ಜನ ಕಳ್ಳರನ್ನು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜೀವ್ ಮತ್ತು ತಂಡ ಬಂಧಿಸಿ ಜೈಲಿಗಟ್ಟಿದ್ದಾರೆ.
ನೆಲಮಂಗಲ ತಾಲೂಕಿನ ಇಸ್ಲಾಂಪುರ ನಿವಾಸಿಗಳಾದ ಬರ್ಕತ್ ಉಲ್ಲಾ 27, ಮಹಮ್ಮದ್ ಮನ್ಸೂರ್ 39, ನವೀನ್ ಕುಮಾರ್ 27, ಸಲಿಂ 33, ಫರ್ಹಾನ್ ಹುಸೇನ್ 24 ಬಂಧಿತ ಆರೋಪಿಗಳು. 450 ಕೆಜಿ ತೂಕದ ತಾಮ್ರದ ಕಚ್ಚಾ ಸಾಮಗ್ರಿಗಳು ಹಾಗೂ ತಾಮ್ರದ ವಯರ್ಗಳು, 50 ಕೆಜಿ ತೂಕದ ಅಲ್ಯೂಮಿನಿಯಂ ತುಂಡುಗಳು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಬೈಕ್‌ಗಳ ಸಹಿತ 4 ಲಕ್ಷದ 50 ಸಾವಿರ ಮೌಲ್ಯದ ಕದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಇನ್ಸ್ಪೆಕ್ಟರ್ ರಾಜೀವ್,ಪಿಎಸೈ ಚಿಕ್ಕನರಸಿಂಹಯ್ಯ, ಶ್ರೀನಿವಾಸಯ್ಯ ಸಿಬ್ಬಂದಿಗಳಾದ ರಂಗನಾಥ್, ಲಕ್ಷ್ಮಣ್, ಹಣಮಂತ ಹಿಪ್ಪರಗಿ, ಸುನೀಲ್ ಕುಮಾರ್, ಹನುಮಂತ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.
ಇದನ್ನೂಓದಿ:ತುಮಕೂರು: ಖೋಟಾ ನೋಟು ಚಲಾವಣೆ ಯತ್ನ, ವಿಚಾರಿಸುತ್ತಿದ್ದಂತೆ ಯುವಕರು ಪರಾರಿ