ಕರ್ನಾಟಕ

karnataka

ಅಮೆರಿಕದಿಂದ ಮತ ಚಲಾಯಿಸಲು ಬಂದ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ

ETV Bharat / videos

ವೋಟ್‌ ಹಾಕಲು ಅಮೆರಿಕದಿಂದ ಬಂದ್ರು: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ನಿರಾಶರಾದ್ರು! - election 2023

By

Published : May 10, 2023, 12:16 PM IST

ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಅಮೆರಿಕದಿಂದ ಬಂದರೂ ಸಹ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗಿಲ್ಲ. ಮತದಾನ ಮಾಡಲೆಂದೇ ದೂರದಿಂದ ಬಂದ ಮತದಾರನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಮನೆಗೆ ನಿರಾಶೆಗೊಂಡು ಹಿಂದಿರುಗಿದ ಘಟನೆ ದಾವಣಗೆರೆಯ ತರಳಬಾಳು ನಗರದಲ್ಲಿ ನಡೆದಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಒಂದು ವಾರ ರಜೆ ಹಾಕಿ ಮತದಾನ ಮಾಡಲು ಸಾಫ್ಟ್​​​ವೇರ್ ಇಂಜಿನಿಯರ್ ರಾಘವೇಂದ್ರ ಕಮಲಾಕರ ಶೇಟ್ ಎನ್ನುವವರು ಆಗಮಿಸಿದ್ದರು‌. ಕಳೆದ 15 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ರಾಘವೇಂದ್ರ ಒಂದು ವಾರ ರಜೆ ಹಾಕಿ ಬಂದಿದ್ದರು. ಆದ್ರೆ ಇವರ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲ.

ಎರಡು ಬೂತ್​ಗಳಿಗೆ ಅಲೆದಾಡಿದ್ರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನು ಒಂದು ಪಕ್ಷದ ‌ಜೊತೆ ಗುರುತಿಸಿಕೊಂಡಿದ್ದೆ. ಅದೇ ಕಾರಣಕ್ಕೆ ನನ್ನ ಹೆಸರು ಈ ಪಟ್ಟಿಯಿಂದ ಹೊರ ಹೋಗಿರುವ ಶಂಕೆ ಇದೆ. 14 ಸಾವಿರ ಕಿ.ಮೀ ಪ್ರಯಾಣಿಸಿ ಬಂದರೂ ಪ್ರಯೋಜನವಾಗಿಲ್ಲ. ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಮತ ಹಾಕಲು ತೆರಳಿದ್ರೆ ನಿಮ್ಮ ಹೆಸರು ಡಿಲೀಟ್ ಆಗಿದೆ" ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. "ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ‌ ಆಗಿಲ್ಲ" ಎಂದು ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:'ಅಪ್ಪು ಇಲ್ಲದೇ ಮತದಾನ ಮಾಡಿದ್ವಿ': ಡಾ.ರಾಜ್ ಕುಟುಂಬ ಭಾವುಕ

ABOUT THE AUTHOR

...view details