ಕರ್ನಾಟಕ

karnataka

ನಳಿನ್​ ಕುಮಾರ್ ಕಟೀಲ್

ETV Bharat / videos

ಬಜರಂಗಿ ಬಗ್ಗೆ ಮಾತನಾಡಿದ ಕಾಂಗ್ರೆಸ್ ಪಕ್ಷ ಸರ್ವನಾಶವಾಗಲಿದೆ : ಕಟೀಲ್ - nalin kumar kateel election campaign

By

Published : May 6, 2023, 9:53 AM IST

ಬಾಗಲಕೋಟೆ: ಬಜರಂಗದಳ‌ ನಿಷೇಧ ಮಾಡುವ ಕಾಂಗ್ರೆಸ್ ‌ಪಕ್ಷದ‌‌ ಬಂಡೆ‌ ಒಡೆದು ಜೈಲು ಪಾಲಾಗಲಿದೆ. ಬಜರಂಗಿ ಬಗ್ಗೆ ಮಾತನಾಡಿದ ಕಾಂಗ್ರೆಸ್ ‌ಪಕ್ಷ ದೇವರ ಶಾಪದಿಂದ‌ ಸರ್ವನಾಶ ಆಗಲಿದೆ ಎಂದು‌ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​‌ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆ ಹಿನ್ನೆಲೆ ಬಾಗಲಕೋಟೆ‌ ಜಿಲ್ಲೆಯ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಕುಂದರಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮುರಗೇಶ್​ ನಿರಾಣಿ  ಪರ ಮತಯಾಚನೆ ಮಾಡಿ, ಬೃಹತ್ ರೋಡ್ ಶೋ ನಡೆಸಿ, ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವುದು ಖಚಿತವಾಗಿದೆ. ಅಲ್ಲಿ ಸೋಮಣ್ಣ ಜಯಭೇರಿ ಬಾರಿಸಲಿದ್ದಾರೆ" ಎಂದರು.  

ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ‌ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯ ಮಾಡಿದ್ದಾರೆ. ಅವರಿಗೆ ಮತ ನೀಡುವ ಮೂಲಕ, ಅಭಿವೃದ್ಧಿಗೆ ಒತ್ತು ನೀಡಿ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪಿ ಎಚ್ ಪೂಜಾರ, ಬಿ ಎನ್ ಖೋತ, ಈರಣ್ಣ ಗಿಡ್ಡಪ್ಪಗೋಳ, ಶಿವಾನಂದ ನಿಂಗನೂರ, ಗ್ರಾಮದ ಹಿರಿಯರು, ಮಹಿಳೆಯರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಇದನ್ನೂ ಓದಿ :ಹುಬ್ಬಳ್ಳಿಯಲ್ಲಿಂದು ​ಸೋನಿಯಾ ಗಾಂಧಿ ಚುನಾವಣಾ ರ‍್ಯಾಲಿ

ABOUT THE AUTHOR

...view details