ಕರ್ನಾಟಕ

karnataka

ಹಾವೇರಿಯಲ್ಲಿ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ: ವಿಡಿಯೋ

ETV Bharat / videos

ಹಾವೇರಿಯಲ್ಲಿ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ: ವಿಡಿಯೋ - Nagara Panchami

By

Published : Aug 21, 2023, 6:36 AM IST

Updated : Aug 21, 2023, 12:36 PM IST

ಹಾವೇರಿ: ಜಿಲ್ಲಾದ್ಯಂತ ಭಾನುವಾರ ಸಡಗರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತಿದೆ. ಹಾವೇರಿ ನಗರದಲ್ಲಿ ಸಹ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಹೆಂಗಳೆಯರು ಹೊಸ ಉಡುಪು ತೊಟ್ಟು ಮುಂಜಾನೆಯಿಂದಲೇ ನಾಗಬನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕೆಲವೆಡೆ ಇಂದೂ ನಾಗಪ್ಪನಿಗೆ ಹಾಲೆರೆದು ಹಂಗನೂಲು ಸೇರಿದಂತೆ ವಿವಿಧ ಕೊಕ್ಕಾಡಬತ್ತಿ ಕಣ್ಬಟ್ಟಲು ಹಾಕಿ ನಾಗರ ಪಂಚಮಿ ಆಚರಿಸಲಿದ್ದಾರೆ . ನಾಗಪ್ಪನಿಗೆ ಪೂಜೆ ಸಲ್ಲಿಸುವ ಮಹಿಳೆಯರು ಬಗೆಬಗೆಯ ಉಂಡೆಗಳ ನೈವಿದ್ಯ ಸಲ್ಲಿಸಿದ್ದಾರೆ. 

ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಮೂರು ದಿನಗಳ ಕಾಲ ನಾಗರ ಪಂಚಮಿ ಆಚರಿಸುತ್ತಾರೆ. ಶನಿವಾರ ದಿನ ರೊಟ್ಟಿ ಪಂಚಮಿ ಆಚರಿಸಿದರೆ, ಭಾನುವಾರ ನಾಗಬನಗಳಿಗೆ ತೆರಳಿ ನಾಗಪ್ಪನಿಗೆ ಹಾಲೆರೆಯುತ್ತಾರೆ. ಕೆಲವರು ಭಾನುವಾರ ಮನೆಯಲ್ಲಿ ಸ್ಥಾಪಿಸುವ ಮಣ್ಣಿನ ನಾಗಪ್ಪಗಳಿಗೆ ಹಾಲೆರೆದು ನಾಗರ ಪಂಚಮಿ ಆಚರಿಸುತ್ತಾರೆ. ಈ ಮಧ್ಯೆ ಹಾವೇರಿ ಕುಂಬಾರ ಕುಟುಂಬಗಳು ಮಣ್ಣಿನ ನಾಗಪ್ಪಗಳನ್ನ ತಯಾರಿಸಿ ಮಾರಾಟ ಮಾಡುವ ದೃಶ್ಯ ಕಂಡುಬಂತು. 

ಕೊನೆಯ ದಿನ ಗಂಗಾಮಾತೆಗೆ ಪೂಜೆ ಸಲ್ಲಿಸುವ ಮೂಲಕ ನಾಗರ ಪಂಚಮಿ ಮುಕ್ತಾಯವಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ ಎಂದು ಕರೆಸಿಕೊಳ್ಳುವ ನಾಗರಪಂಚಮಿಯನ್ನು ಉತ್ತರ ಕರ್ನಾಟಕದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಹಿಳೆಯರು ಬಗೆಬಗೆಯ ಉಂಡಿ ಕಟ್ಟಿ ಜೋಕಾಲಿಯಲ್ಲಿಯಾಡಿ ಸಂತಸಪಡುತ್ತಾರೆ. ಮೂರು ದಿನಗಳ ಈ ಹಬ್ಬದಲ್ಲಿ ಮಹಿಳೆಯರು ನಾಗಬನಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೊಸದಾಗಿ ಮದುವೆಯಾಗಿ ಹೋದ ಮಹಿಳೆಯರು ಈ ಹಬ್ಬ ಆಚರಣೆಗೆ ತವರು ಮನೆಗೆ ಆಗಮಿಸುವುದು ವಿಶೇಷ.

ಇದನ್ನೂ ಓದಿ:ಧಾರವಾಡ ಜಾನಪದ ಸಂಶೋಧನಾ ಕೇಂದ್ರದ ಮಹಿಳೆಯರಿಂದ ಪಂಚಮಿ ಹಬ್ಬದ ಸಂಭ್ರಮಾಚರಣೆ: VIDEO

Last Updated : Aug 21, 2023, 12:36 PM IST

ABOUT THE AUTHOR

...view details