ಮೈಸೂರು ದಸರಾ: ಕುಶಾಲತೋಪು ಸಿಡಿಸುವ ತಾಲೀಮು- ವಿಡಿಯೋ - 21 ಕುಶಾಲ ತೋಪುಗಳನ್ನು ಸಿಡಿಸುವ ಸಂಪ್ರದಾಯ
Published : Oct 6, 2023, 9:39 PM IST
ಮೈಸೂರು:ವಿಶ್ವವಿಖ್ಯಾತನಾಡಹಬ್ಬ ಮೈಸೂರುದಸರಾಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಬಳಿಕ ರಾಜ ಪರಂಪರೆಯಂತೆ 21 ಕುಶಾಲ ತೋಪುಗಳನ್ನು ಸಿಡಿಸುವ ಸಂಪ್ರದಾಯವಿವೆ. ಈ ಹಿನ್ನೆಲೆಯಲ್ಲಿ ಅರಮನೆಯ ಆನೆ ಬಾಗಿಲಿನಲ್ಲಿ ಇಂದು ಕುಶಾಲತೋಪು ಸಿಡಿಸುವ ತಾಲೀಮು ಆರಂಭವಾಯಿತು.
ಕಳೆದ ಎರಡು ದಿನಗಳ ಹಿಂದೆ ಅರಮನೆಯ ಆನೆ ಬಾಗಿಲಿನಲ್ಲಿರುವ 11 ಕುಶಾಲತೋಪು ಸಿಡಿಸುವ ಗಾಡಿಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಗುರುವಾರದಿಂದ ನಗರ ಸಶಸ್ತ್ರ ಮೀಸಲು ಪಡೆಯ ಫಿರಂಗಿ ದಳದ 35 ಸಿಬ್ಬಂದಿ ಕುಶಾಲತೋಪು ಸಿಡಿಸುವ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.
ತಾಲೀಮು ಹೇಗಿರುತ್ತದೆ?: ಕುಶಾಲತೋಪು ಒಮ್ಮೆ ಸಿಡಿದ ನಂತರ ಮಿಂಚಿನ ವೇಗದಲ್ಲಿ 'ಸಿಂಬ'ವನ್ನು ಬ್ಯಾರೆಲ್ಗೆ ತೂರಿಸಿ ಬೆಂಕಿ ಕಿಡಿ ಮದ್ದಿನ ಚೂರು ಹೊರತೆಗೆಯಬೇಕು. ವಿಜಯದಶಮಿ ದಿನ ರಾಷ್ಟ್ರ ಗೀತೆ ಕೇಳಿಬರುವ 53 ಸೆಕೆಂಡುಗಳಲ್ಲಿ 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಇಷ್ಟು ಕಡಿಮೆ ಸೆಕೆಂಡುಗಳಲ್ಲಿ ಬ್ಯಾರೆಲ್ ಅನ್ನು 21 ಬಾರಿ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಇದಕ್ಕಾಗಿ ನಿತ್ಯ ತಾಲೀಮು ನಡೆಯುತ್ತಿದೆ. ಕೆಲವು ದಿನಗಳ ನಂತರ ಕುದುರೆ, ಆನೆಗಳ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ಇರುತ್ತದೆ.
ಇದನ್ನೂಓದಿ:ಮೈಸೂರು ದಸರಾ: 135 ಕಿ.ಮೀ ವಿದ್ಯುತ್ ದೀಪಾಲಂಕಾರದಲ್ಲಿ ಮಿನುಗಲಿದೆ ಸಾಂಸ್ಕೃತಿಕ ನಗರಿ