ಮೈಲಾಪುರ ಮಲ್ಲಯ್ಯನ ಜಾತ್ರೆ: ಭಂಡಾರದಲ್ಲಿ ಮಿಂದೆದ್ದ ಭಕ್ತಸಾಗರ - ಯಾದಗಿರಿ ತಾಲೂಕಿನ ಶ್ರೀಕ್ಷೇತ್ರ ಮೈಲಾಪುರ
ಯಾದಗಿರಿ:ತಾಲೂಕಿನ ಶ್ರೀಕ್ಷೇತ್ರ ಮೈಲಾಪುರದ ಶ್ರೀಮೈಲಾರಲಿಂಗೇಶ್ವರ ಜಾತ್ರೆ ಈ ಬಾರಿ ಅದ್ಧೂರಿಯಿಂದ ಜರುಗಿತು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಏಳು ಕೋಟಿಗೆ ಏಳು ಕೋಟಿ ಝೇಂಕಾರದ ಕೂಗು ಮುಗಿಲು ಮುಟ್ಟಿತ್ತು. ಹೊನ್ನಕೆರೆಯಲ್ಲಿ ಮಲ್ಲಯ್ಯನಿಗೆ ವಿವಿಧ ಪೂಜಾ, ಕೈಂಕರ್ಯಗಳು ಮುಗಿದ ನಂತರ ಮೆರವಣಿಗೆ ಮೂಲಕ ದೇವಸ್ಥಾನ ಕೆಳಗಿರುವ ಪಾದಗಟ್ಟೆಯಲ್ಲಿ ಪೂಜಾರಿಯವರು ಮಲ್ಲಯ್ಯನಿಗೆ ಜೈಕಾರ ಹಾಕಿ ಸರಪಳಿ ಹರಿದರು. ಸರಪಳಿ ಹರಿಯುವ ಈ ಭಕ್ತಿಭಾವದ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಇನ್ನು ಜಾತ್ರೆ ವೇಳೆ ಪಲ್ಲಕ್ಕಿ ಮೆರವಣಿಗೆಯಲ್ಲಿ ಕುರಿಗಳನ್ನು ಎಸೆಯುವುದು ನಿಷೇಧಸಲಾಗಿದ್ದು, ಪರಿಶೀಲನೆಗಾಗಿ 5 ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಒಂದು ವೇಳೆ ಕುರಿ, ಮೇಕೆಗಳನ್ನು ಎಸೆಯುವ ದೃಶ್ಯ ಕಂಡು ಬಂದರೆ ಅವುಗಳನ್ನು ವಶಕ್ಕೆ ಪಡೆದು ಸುರಕ್ಷಿತವಾಗಿಟ್ಟು ನಂತರ ಪಶು ಇಲಾಖೆಗೆ ಒಪ್ಪಿಸಲಾಗುವುದು. ಹೊನ್ನಕೆರೆಯಲ್ಲಿ ಯಾರು ಇಳಿಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಅಲ್ಲದೆ ಅಗ್ನಿಶಾಮಕ ದಳವನ್ನು ಇರಿಸಲಾಗಿತ್ತು.