ಮಡಿಕೇರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮುತ್ತಪ್ಪ ಉತ್ಸವ - Muttappa Temple
ಕೊಡಗು: ಐತಿಹಾಸಿಕ ಮುತ್ತಪ್ಪ ದೇವಾಲಯದಲ್ಲಿ 14 ದೇವಾನುದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶುಕ್ರವಾರ ರಾತ್ರಿಯಿಡೀ ಸಂಭ್ರಮದಿಂದ ನಡೆಯಿತು. ಮುತ್ತಪ್ಪನ್, ತಿರುವಪ್ಪನ್, ಸುಬ್ರಹ್ಮಣ್ಯ, ಅಯ್ಯಪ್ಪ, ಶಕ್ತಿ ಗಣಪತಿ, ಭಗವತಿ, ವಿಷ್ಣುಮೂರ್ತಿ, ಗುಳಿಗ, ಶಿವಭೂತಂ, ಗುರು, ಪೋದಿ, ಕುಟ್ಟಿಚಾತನ್, ಯಕ್ಷಿ, ನಾಗರಾಜ, ನಾಗಯಕ್ಷಿ, ನಾಗದೇವರ ಬನ ಸೇರಿದಂತೆ 14 ದೇವಾನುದೇವತೆಗಳ ಉತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.
ಮಧ್ಯರಾತ್ರಿ 12 ಗಂಟೆಗೆ ನಡೆಯುವ ವಸೂರಿಮಾಲಾ ಉತ್ಸವದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ದೇವಾಲಯ ಸಮೀಪದ ನದಿ ಅಥವಾ ಜಲಮೂಲದಿಂದ ವಸೂರಿಮಾನ ದೇವಿಯ ಕೋಲ ಆರಂಭವಾಗಿ ದೇವಾಲಯದವರೆಗೂ ಚೆಂಡೆ ವಾದ್ಯದೊಂದಿಗೆ ಮೆರವಣಿಗೆ ಸಾಗುತ್ತದೆ. ಆಗ ಯುವಕರು ವಸೂರಿಮಾಲ ದೇವಿಯ ಕಿವಿಯಲ್ಲಿ ಜೋರಾಗಿ ಕಿರುಚುತ್ತಾರೆ. ಈ ವೇಳೆ ಸಿಟ್ಟಿನಿಂದ ವಸೂರಿಮಾಲ ದೇವಿ ಯುವಕರನ್ನು ಓಡಿಸುವುದು ವಿಶೇಷ.
ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಮಲೆ ಇಳಿಸುವುದು, ಶಾಸ್ತಪ್ಪ ದೇವರ ವೆಳ್ಳಾಟಂ, ಮುತ್ತಪ್ಪ ದೇವರ ವೆಳ್ಳಾಟಂ, ವಿಷ್ಣಮೂರ್ತಿ ಮೇಲೇರಿಗೆ ಅಗ್ನಿಸ್ಪರ್ಶ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಮತ್ತು ಪೋದಿ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ ದೇವರ ತೆರೆ, ಕಳಗಪಾಟ್, ಸಂದ್ಯಾವೇಲೆ, ಕುಟ್ಟಿಚಾತನ್ ದೇವರ ತೆರೆ ಸೇರಿದಂತೆ ಅನೇಕ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿಯಿಡೀ ನಡೆಯಿತು. ಇನ್ನು ಮುತ್ತಪ್ಪ ದೇವಾಲಯ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿತು.
ಇದನ್ನೂ ಓದಿ:ಬೆಂಗಳೂರು: ಐತಿಹಾಸಿಕ ಕರಗ ಶಕ್ತ್ಯೋತ್ಸವ ಸಂಭ್ರಮ
TAGGED:
ಮುತ್ತಪ್ಪ ಉತ್ಸವ