ಭಾವೈಕ್ಯತೆಯ ದೀಪಾವಳಿ.. ಶ್ರೀರಾಮನಿಗೆ ಆರತಿ ಬೆಳಗಿದ ಮುಸ್ಲಿಂ ಮಹಿಳೆಯರು: ವಿಡಿಯೋ - ಅಯೋಧ್ಯಾ ಶ್ರೀರಾಮನ ಭಜಿಸಿದ ಮುಸ್ಲಿಂ ಮಹಿಳೆಯರು
ಉತ್ತರಪ್ರದೇಶದಲ್ಲಿ ದೀಪಾವಳಿ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಯಿತು. ವಾರಾಣಸಿಯಲ್ಲಿ ಅಖಿಲ ಭಾರತ ಸಂಸ್ಥಾನ ಮತ್ತು ಮುಸ್ಲಿಂ ಮಹಿಳಾ ಫೌಂಡೇಶನ್ನಿಂದ ಹಮ್ಮಿಕೊಂಡಿದ್ದ ಶ್ರೀರಾಮನಿಗೆ ಆರತಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರು ಮರ್ಯಾದಾ ಪುರುಷೋತ್ತಮನಿಗೆ ಆರತಿ ಬೆಳಗಿದರು. ಇಷ್ಟೇ ಅಲ್ಲದೇ, ಉರ್ದುವಿನಲ್ಲಿ ಶ್ರೀರಾಮನನ್ನು ಜಪಿಸಿದರು. ಅಯೋಧ್ಯೆ ರಾಮನ ಝಗಮಗಿಸುವ ಆರತಿ ಹಿಂಸೆ ಮತ್ತು ದ್ವೇಷದ ಕತ್ತಲೆಯನ್ನು ಹೋಗಲಾಡಿಸಲಿ ಎಂದು ಪ್ರಾರ್ಥಿಸಿದರು.
Last Updated : Feb 3, 2023, 8:29 PM IST