ಇರಾನ್‌ನ ಹಿಜಾಬ್ ವಿರೋಧಿ ಪ್ರತಿಭಟನೆಗೆ ಕೋಯಿಕ್ಕೋಡ್‌ನಲ್ಲಿ ಸಾತ್.. - hijab burned in Kozhikode
ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಗೆ ಒಗ್ಗಟ್ಟಾಗಿ ಧ್ವನಿ ಎತ್ತಲು ಫ್ರೀ ಇಸ್ಲಾಮಿಕ್ ಚಿಂತಕರ ಸಂಘಟನೆಗೆ ಸೇರಿದ ಮುಸ್ಲಿಂ ಯುವತಿಯರ ಗುಂಪು 'ಹಿಜಾಬ್' ಅನ್ನು ಸುಟ್ಟು ಹಾಕಿದೆ. ಕೋಯಿಕ್ಕೋಡ್ ಟೌನ್ ಹಾಲ್ ಬಳಿ ಪ್ರತಿಭಟನಾಕಾರರು ಹಿಜಾಬ್ ಅನ್ನು ಸುಟ್ಟು ಹಾಕಿದರು. ಸುಮಾರು ಆರು ಜನ ಮುಸ್ಲಿಂ ಮಹಿಳೆಯರು ಒಗ್ಗಟ್ಟಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಗೆ ವಿವಿಧ ದೇಶಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ ಮತ್ತು ಕೋಯಿಕ್ಕೋಡ್‌ನಲ್ಲಿ ಪ್ರತಿಭಟನಾಕಾರರು ಇರಾನ್ ಮಹಿಳೆಯರ ಹೋರಾಟವನ್ನು ಬೆಂಬಲಿಸಿ ಹಿಜಾಬ್‌ಗಳನ್ನು ಸುಡುತ್ತಿದ್ದಾರೆ ಎಂದು ಹೇಳಿದರು.
Last Updated : Feb 3, 2023, 8:31 PM IST