ಹರಕೆ ಈಡೇರಿಸಿದ ದೇವತೆಗೆ ಹೋಮ ಹವನ ಮಾಡಿಸಿ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ! - etv bharat kannada
ಫಿರೋಜಾಬಾದ್(ಉತ್ತರ ಪ್ರದೇಶ): ದೇಶದ ಹಲವೆಡೆ ರಾಮನವಮಿ ದಿನ ಕೋಮು ಘರ್ಷಣೆಗಳು ವರದಿಯಾಗಿವೆ. ಇದರ ನಡುವೆ ಉತ್ತರ ಪ್ರದೇಶದ ಫಿರೋಜಾಬಾದ್ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಯಿತು.
ಫಿರೋಜಾಬಾದ್‌ನಲ್ಲಿ ಮುಸ್ಲಿಂ ಕುಟುಂಬವೊಂದು ರಾಮನವಮಿಯ ದಿನದಂದು ತಮ್ಮ ಗ್ರಾಮದ ಬಳಿಯ ಪತ್ವಾರಿ ದೇವಸ್ಥಾನದಲ್ಲಿ ವೈದಿಕ ವಿಧಿಗಳ ಪ್ರಕಾರ ಹವನವನ್ನು ಮಾಡಿ ಪೂಜೆ ಸಲ್ಲಿಸಿದೆ. ಪೂಜೆ ಮುಗಿದ ನಂತರ ಪ್ರಸಾದವಾಗಿ ಹಲ್ವ ಹಂಚಿದೆ. ಸಿರ್ಸಗಂಜ್ ಪ್ರದೇಶದ ಫತೇಪುರ್ ಕಾರ್ಖಾ ರಫೀಕ್ ಮೊಹಮ್ಮದ್ ಎಂಬುವವರು ತಮ್ಮ ಇಷ್ಟಾರ್ಥ ಸಿದ್ಧಿಗೆ ಅಲ್ಲಿನ ದೇವಿಗೆ ಹರಕೆ ಹೊತ್ತುಕೊಂಡಿದ್ದರು, ಹರಕೆ ಈಡೇರಿದ ಕಾರಣ ಕುಟುಂಬ ಸಮೇತರಾಗಿ ಬಂದು ಗುರುವಾರ ಪೂಜೆ ನೇರವೇರಿಸಿದ್ದಾರೆ. ಸದ್ಯ ರಂಜಾನ್ ಮಾಸ ನಡೆಯುತ್ತಿದೆ. ರಫೀಕ್ ಉಪವಾಸ ಇದ್ದುಕೊಂಡು ದೇವರ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆದಿದೆ.
ರಫೀಕ್ ಮೊಹಮ್ಮದ್‌ನ ತಾಯಿ ಹಫೀಜಾನ್ ಬೇಗಂ ಮಾತನಾಡಿ, ತನ್ನ ಮಗ ದೇವತೆಗೆ ಹರಕೆ ಹೊತ್ತುಕೊಂಡಿದ್ದ, ಅದು ಈಡೇರಿದ ಹಿನ್ನೆಲೆ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು. ರಫೀಕ್ ಮೊಹಮ್ಮದ್ ಮಾತನಾಡಿ ನಾನು ಖಂಡಿತವಾಗಿಯೂ ಮುಸ್ಲಿಂ, ಆದರೆ ಎಲ್ಲಾ ಧರ್ಮವನ್ನು ಗೌರವಿಸುತ್ತೇನೆ ಎಂದು ಭಾವೈಕ್ಯತೆ ಮೆರೆದಿದ್ದಾರೆ.