ಕರ್ನಾಟಕ

karnataka

ಬಾಂಬ್ ಬೆದರಿಕೆ ಕರೆಯಿಂದ ಎಚ್ಚೆತ್ತ ಪೊಲೀಸರಿಂದ ತನಿಖೆ ನಡೆಸಲಾಯಿತು

ETV Bharat / videos

ಅಂತಾರಾಷ್ಟ್ರೀಯ ಆ್ಯಪ್ ಬಳಸಿ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ.. ಪೊಲೀಸರಿಂದ ಕೋರ್ಟ್​​ ಶೋಧ

By

Published : Feb 15, 2023, 8:12 PM IST

ಔರಂಗಾಬಾದ್ : 'ಹಣ ಪಾವತಿ ಕೆಲಸ ಮಾಡುವುದಿಲ್ಲ, ಹಾಗಾಗಿ ನಾನು ಹೈಕೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದೇನೆ' ಎಂಬ ಅನಾಮಧೇಯ ಫೋನ್ ಕರೆ ಔರಂಗಬಾದ್​ ಪೊಲೀಸರನ್ನು ಕೆರಳಿಸಿದೆ. ಹೀಗಾಗಿ ಸುಮಾರು ನಾಲ್ಕು ಗಂಟೆಗಳವರೆಗೆ ಔರಂಗಬಾದ್​  ಹೈಕೋರ್ಟ್​ನಲ್ಲಿ ಪೊಲೀಸರು ತನಿಖೆಯನ್ನು ನಡೆಸಿ ನಂತರ ಏನೂ ಇಲ್ಲದಿರುವುದು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. 

ವಿಶೇಷ ಆಪ್ ಬಳಸಿ ಪೊಲೀಸರಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಕರೆ ಮಾಡಿದವರು ಪೊಲೀಸರಿಗೆ ವಕೀಲ ದತ್ತಾತ್ರೇ ಜಾಧವ್ ಅವರ ಸಂಖ್ಯೆಯನ್ನು ನೀಡಿದ್ದಾರೆ. ಹೀಗಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಅವರಿಗೆ ಈ ಬಗ್ಗೆ ತಿಳಿದಿರಲಿಲ್ಲ ಎಂಬುದು ತಿಳಿದು ಬಂದಿದೆ. ಹೀಗಾಗಿ ಇದೀಗ ಕರೆ ಮಾಡಿದವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಹಿಂದಿಯಲ್ಲಿ ಮಾತನಾಡಿದ ಅನಾಮಧೇಯ ವ್ಯಕ್ತಿ, ಹಣ ಕೊಡುವ ಕೆಲಸ ಆಗದ ಕಾರಣ ಹೈಕೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದೆ ಎಂದಿದ್ದಾರೆ. ನ್ಯಾಯಾಲಯದ ಮುಕ್ತಾಯದ ಸಮಯವಾದ್ದರಿಂದ ಗೌರವಾನ್ವಿತ ನ್ಯಾಯಾಧೀಶರು, ವಕೀಲರು, ಕೆಲಸಕ್ಕಾಗಿ ಬಂದಿದ್ದ ನಾಗರಿಕರು ಕೋರ್ಟ್ ಆವರಣದಿಂದ ನಿರ್ಗಮಿಸಿದ್ದರು. ಆದರೆ, ಏಕಾಏಕಿ ಫೋನ್ ಮಾಡಿದ ಕಾರಣ ಪೊಲೀಸರು ಓಡಲಾರಂಭಿಸಿದ್ದಾರೆ. ಅಲ್ಲದೇ ಕೂಡಲೇ ಬಾಂಬ್ ಸ್ಕ್ವಾಡ್‌ಗೆ ಕರೆ ಮಾಡಿದ್ದಾರೆ. ನಂತರ ನ್ಯಾಯಾಲಯದಲ್ಲಿ ತನಿಖಾ ಕಾರ್ಯ ಆರಂಭವಾಗಿದೆ. ಮೊದಲ ಮಹಡಿಯಿಂದ ಸಂಪೂರ್ಣ ಹುಡುಕಾಟ ನಡೆಸಿದ ಪೊಲೀಸರು ಯಾವುದೇ ಬಾಂಬ್​ ಸಿಗದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಓದಿ :ವಿಡಿಯೋ: ಜೋಡಿ ಚಿರತೆ ಬೋನಿಗೆ ಬಿದ್ದ ಸ್ಥಳದಲ್ಲೇ ಮತ್ತೊಂದು 8 ತಿಂಗಳ ಚಿರತೆ ಮರಿ ಸೆರೆ

ABOUT THE AUTHOR

...view details