ಕರ್ನಾಟಕ

karnataka

ವೈರಲ್​ ವಿಡಿಯೋ

ETV Bharat / videos

ಇಬ್ಬರು ಯುವತಿಯರನ್ನು ಕೂರಿಸಿಕೊಂಡು ಅಪಾಯಕಾರಿ ಬೈಕ್‌ ಸ್ಟಂಟ್‌, ಆರೋಪಿ ಸೆರೆ​- ವಿಡಿಯೋ - ಬೈಕ್​ನಲ್ಲಿ ಯುವತಿಯರನ್ನ ಕೂರಿಸಿಕೊಂಡು ಸ್ಟಂಟ್

By

Published : Apr 3, 2023, 6:51 AM IST

ಮುಂಬೈ: ಬೈಕ್‌ನಲ್ಲಿ ಓರ್ವ ಯುವತಿಯನ್ನು ಹಿಂಬದಿ ಸೀಟಿನಲ್ಲಿಯೂ ಮತ್ತೊಬ್ಬಳನ್ನು ಮುಂದೆ ಕೂರಿಸಿಕೊಂಡು ಯುವಕನೊಬ್ಬ ಅಪಾಯಕಾರಿ ವ್ಹೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಕುರಿತು ತನಿಖೆ ನಡೆಸಿದ ಮುಂಬೈನ ಬಿಕೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಫೈಯಾಜ್ ಖಾದ್ರಿ ಬಂಧಿತ ಆರೋಪಿ.  

ವಿಡಿಯೋ ವಿವರ:ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವತಿಯರೊಂದಿಗೆ ಯುವಕನೋರ್ವ ಬೈಕ್ ಸ್ಟಂಟ್ ಮಾಡಿದ್ದಾನೆ. ಈ ಮೂಲಕ ರಸ್ತೆ ಸಂಚಾರದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಮೂವರು ಕೂಡಾ ಹೆಲ್ಮೆಟ್‌ ಧರಿಸಿರಲಿಲ್ಲ. "ಇಂಥ ವ್ಹೀಲಿಂಗ್‌ ದುಸ್ಸಾಹಸದಲ್ಲಿ ಸ್ವಲ್ಪ ಎಡವಿದ್ರೂ ಪ್ರಾಣಕ್ಕೆ ಅಪಾಯವಿದೆ. ಹಾಗಾಗಿ, ಯಾರೂ ಈ ರೀತಿಯ ಕೆಟ್ಟ ಸಾಹಸಕ್ಕೆ ಮುಂದಾಗಬಾರದು" ಎಂದು ಪೊಲೀಸರು ಎಚ್ಚರಿಸಿದ್ದಾರೆ. ಮಾರ್ಚ್ 31 ರಂದು ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಆಧಾರದ ಮೇಲೆ ಫೈಯಾಜ್ ಮತ್ತು ಇಬ್ಬರು ಮಹಿಳೆಯರ ವಿರುದ್ಧ ಬಿಕೆಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 308ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ :ರಸ್ತೆಯಲ್ಲಿ ಬೈಕ್​ ವ್ಹೀಲಿಂಗ್ ಮಾಡುತ್ತಾ ಶಾಲಾ ವಿದ್ಯಾರ್ಥಿನಿಗೆ ಗುದ್ದಿದ ಸವಾರ... ಸಿಸಿಟಿವಿ ವಿಡಿಯೋ

ABOUT THE AUTHOR

...view details