ನನ್ನ ಸ್ನೇಹಿತರ ಸಹಕಾರದಿಂದ ನಾನು ಇಂದು ಎಂ ಪಿ ಆಗಿದ್ದೇನೆ: ಜಿ ಎಸ್ ಬಸವರಾಜ್ - member of Lok Sabha
ತುಮಕೂರು: ನನ್ನ ಸ್ನೇಹಿತರ ಸಹಕಾರದಿಂದ ನಾನು ಇಂದು ಲೋಕಸಭಾ ಸದಸ್ಯನಾಗಿದ್ದೇನೆ ಹೊರತು ನನ್ನ ವೈಯಕ್ತಿಕ ಶಕ್ತಿಯಿಂದ ಅಲ್ಲ ಎಂದು ತುಮಕೂರು ಬಿಜೆಪಿ ಸಂಸದ ಜಿಎಸ್ ಬಸವರಾಜ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಧುಗಿರಿ ತಾಲೂಕಿನ ಕೊಡುಗೇನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ ಕೇವಲ 22 ಸಾವಿರ ಮತಗಳನ್ನು ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಡೆದುಕೊಂಡಿದ್ದೆ. ಆದರೆ ಈ ಬಾರಿ ನನಗೆ ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 79,000 ಮತಗಳು ಬಂದಿವೆ. ಇದಕ್ಕೆ ನನ್ನ ಸ್ನೇಹಿತ( ಕೆಎನ್ ರಾಜಣ್ಣ) ಅವರ ಸಹಕಾರವಿದೆ ಎಂದು ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಹೇಳಿದರು.
Last Updated : Feb 3, 2023, 8:38 PM IST