ಕರ್ನಾಟಕ

karnataka

ETV Bharat / videos

'ಮದ್ಯ, ಗುಟ್ಕಾ ಸೇವಿಸಿ ನೀರು ಉಳಿಸಿ..': ಜಲ ಸಂರಕ್ಷಣೆಗೆ ಬಿಜೆಪಿ ಸಂಸದರ ವಿಚಿತ್ರ ಸಲಹೆ! - ಜಲ ಸಂರಕ್ಷಣಾ ಕಾರ್ಯಾಗಾರ

🎬 Watch Now: Feature Video

By

Published : Nov 8, 2022, 9:07 AM IST

Updated : Feb 3, 2023, 8:31 PM IST

ರೇವಾ (ಮಧ್ಯಪ್ರದೇಶ): ರೇವಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಜನಾರ್ದನ್ ಮಿಶ್ರಾ ಅವರು ಜಲ ಸಂರಕ್ಷಣೆ ಕುರಿತು ವಿಚಿತ್ರ ಹೇಳಿಕೆ ನೀಡಿದ್ದಾರೆ. ಇಲ್ಲಿನ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ನಡೆದ ಜಲ ಸಂರಕ್ಷಣಾ ಕಾರ್ಯಾಗಾರದಲ್ಲಿ 'ಅಂತರ್ಜಲ ಬರಿದಾಗುತ್ತಿದೆ' ಎಂಬ ವಿಷಯದ ಕುರಿತು ಮಾತನಾಡಿದ ಅವರು, "ಭೂಮಿ ನೀರಿಲ್ಲದೆ ಒಣಗುತ್ತಿದೆ, ಅದನ್ನು ಉಳಿಸಬೇಕು. ಒಂದೋ ಗುಟ್ಕಾ ತಿನ್ನಿರಿ, ಮದ್ಯವನ್ನು ಸೇವಿಸಿ ಅಥವಾ ಅಯೋಡೆಕ್ಸ್ ತಿನ್ನಿರಿ. ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ" ಎಂದರು. ಈ ವಿವಾದಿತ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಶ್ರಾ ವಿಚಿತ್ರ ಹೇಳಿಕೆ, ವರ್ತನೆಗೆ ಸುದ್ದಿಯಾಗುತ್ತಿರುವುದು ಇದು ಮೊದಲಲ್ಲ. ಇತ್ತೀಚೆಗಷ್ಟೇ, ಇವರು ಬರಿಗೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
Last Updated : Feb 3, 2023, 8:31 PM IST

ABOUT THE AUTHOR

...view details