ಕರ್ನಾಟಕ

karnataka

ವಂಚನೆ ಆರೋಪ

ETV Bharat / videos

ಮೈಸೂರು: ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಉಪನ್ಯಾಸಕನಿಂದ ಶಿಕ್ಷಕರಿಗೆ ವಂಚನೆ ಆರೋಪ

By ETV Bharat Karnataka Team

Published : Dec 12, 2023, 5:59 PM IST

Updated : Dec 13, 2023, 12:15 PM IST

ಮೈಸೂರು : ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ರಾಜ್ಯ ಕಾಲೇಜು ಅಧ್ಯಾಪಕರು ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಮಹದೇವಸ್ವಾಮಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರು ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರು ಆರೋಪ ಮಾಡಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

''ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಮಹದೇವಸ್ವಾಮಿ 8 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಲೋಕಾಯುಕ್ತ ಪ್ರಕಟಣೆ ಹೊರಡಿಸಿದೆ. 2010 ರಿಂದ ಸೈಟ್ ಕೊಡುತ್ತೇನೆ ಎಂದು ಹಲವರಿಂದ ಹಣ ಕಟ್ಟಿಸಿಕೊಂಡು ನಿವೇಶನ ನೀಡದೇ ಗುರುಕುಲ ಬಡಾವಣೆ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. ನಾವು ಕಟ್ಟಿದ್ದ ಹಣವನ್ನು ತಮ್ಮ ಹೆಂಡತಿ ಮತ್ತು ಮಕ್ಕಳ ಹೆಸರಿಗೆ ವರ್ಗಾಯಿಸಿಕೊಂಡಿದ್ದು, ಈ ಬಗ್ಗೆ ಪೊಲೀಸ್​ ಇಲಾಖೆಗೆ ಹಾಗೂ ಸಹಕಾರಿ ಇಲಾಖೆಗೆ ದೂರು ಕೊಟ್ಟರು ಯಾವುದೇ ಪ್ರಯೋಜನ ಆಗಿಲ್ಲ. ಸಹಕಾರಿ ಇಲಾಖೆಯ ತನಿಖೆಯಾದರೆ ತಡೆಯಾಜ್ಞೆ ತರುತ್ತಾರೆ. ಎಲ್ಲಿ ಹೋದರೂ ನ್ಯಾಯ ಸಿಗುತ್ತಿಲ್ಲ. ಇನ್ನಾದರೂ ಮಹದೇವಸ್ವಾಮಿ ವಿರುದ್ಧ ತನಿಖೆ ನಡೆಸಿ ನಮಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು. ನಮ್ಮ ಹಣ ನಮಗೆ ಬೇಕು'' ಎಂದು ಗೃಹ ನಿರ್ಮಾಣ ಸಂಘದ ಸದಸ್ಯ ನಂಜಪ್ಪಸ್ವಾಮಿ ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಇದನ್ನೂ ಓದಿ :9 ವರ್ಷಗಳಿಂದ ವಂಚನೆಯಲ್ಲಿ ತೊಡಗಿದ್ದ ಆರೋಪಿ ಒಂದೇ ದಿನದಲ್ಲಿ ಸಿಸಿಬಿ ಬಲೆಗೆ

Last Updated : Dec 13, 2023, 12:15 PM IST

ABOUT THE AUTHOR

...view details