ಕರ್ನಾಟಕ

karnataka

ಬೆಂಕಿ ತಗುಲಿ 300ಕ್ಕೂ ಅಧಿಕ ಅಡಿಕೆ ಮರಗಳು ಸುಟ್ಟು ಭಸ್ಮ

ETV Bharat / videos

ಬೆಂಕಿ ತಗುಲಿ 300ಕ್ಕೂ ಅಧಿಕ ಅಡಿಕೆ ಮರಗಳು ನಾಶ - ಅಡಿಕೆ ತೋಟ

By ETV Bharat Karnataka Team

Published : Dec 29, 2023, 12:35 PM IST

ಹಾವೇರಿ: ರಸ್ತೆ ಬದಿಯಲ್ಲಿ ಹಾಕಿದ್ದ ಅಡಿಕೆ ಸಿಪ್ಪೆಗೆ ಹಾಕಿದ್ದ ಬೆಂಕಿಯು ಪಕ್ಕದ ತೋಟಕ್ಕೆ ವ್ಯಾಪಿಸಿ, 300 ಕ್ಕೂ ಅಧಿಕ ಅಡಿಕೆ ಮರಗಳು ಸುಟ್ಟುಹೋದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ :ಡಂಪರ್​ - ಬಸ್​ ಮಧ್ಯೆ ಡಿಕ್ಕಿ, ಧಗಧಗನೇ ಉರಿದ ವಾಹನಗಳು , 12 ಜನ ಸಜೀವದಹನ

ನರೇಗಲ್ ಗ್ರಾಮದ ಕರಿಬಸಪ್ಪ ಗೊಂದಿ ಎಂಬುವರಿಗೆ ಸೇರಿದ ಅಡಿಕೆ ತೋಟ ಬೆಂಕಿಯ‌ ಕೆನ್ನಾಲಿಗಿಗೆ ತುತ್ತಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ಮಧ್ಯೆ, ನಷ್ಟಕ್ಕೀಡಾದ ಅಡಿಕೆ ತೋಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ :ದೀಪದಿಂದ ಮನೆಗೆ ಹೊತ್ತಿಕೊಂಡ ಬೆಂಕಿ : 4 ಕುರಿ ಸಜೀವ ದಹನ , ಟ್ರ್ಯಾಕ್ಟರ್​ ಖರೀದಿಗೆ ಇಟ್ಟಿದ್ದ 4.75 ಲಕ್ಷ ರೂ . ನಗದು ಸುಟ್ಟು ಭಸ್ಮ

ABOUT THE AUTHOR

...view details