ಕರ್ನಾಟಕ

karnataka

ಒಂದೇ ವೇದಿಕೆಯಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಅಂಗಾಂಗ ದಾನಕ್ಕೆ ವಾಗ್ದಾನ

ETV Bharat / videos

Organs donate: ಒಂದೇ ವೇದಿಕೆಯಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಅಂಗಾಂಗ ದಾನಕ್ಕೆ ವಾಗ್ದಾನ

By ETV Bharat Karnataka Team

Published : Sep 12, 2023, 2:40 PM IST

ಸೂರತ್ (ಗುಜರಾತ್):ವೀರ್ ನರ್ಮದ್ ಸೌತ್ ಗುಜರಾತ್ ವಿಶ್ವವಿದ್ಯಾನಿಲಯದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ಪಣ ತೊಟ್ಟಿದ್ದಾರೆ. ಅಂಗಾಂಗ ದಾನದ ಪ್ರತಿಜ್ಞೆ ದಿನವಾದ ಇಂದು ವಿಎನ್​ಡಿಜಿಯುನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸೇರಿದ್ದರು. ನವಜೀವನ ಸೇವಾ ಪ್ರತಿಷ್ಠಾನ ಮತ್ತು ಅಂಗದಾನ ಚಾರಿಟೇಬಲ್ ಟ್ರಸ್ಟ್‌ನ ಜಂಟಿ ಅಂಗಾಂಗ ದಾನ ಜಾಗೃತಿ ಅಭಿಯಾನದಡಿ ಅಂಗಾಂಗ ದಾನ ಪ್ರತಿಜ್ಞೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಅಂಗಾಂಗ ದಾನದ ಪ್ರತಿಜ್ಞೆ ಸ್ವೀಕರಿಸಿ ಅಂಗಾಂಗ ದಾನ ಜಾಗೃತಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು.

ವಿಶ್ವವಿದ್ಯಾನಿಲಯದ ಲಲಿತಕಲಾ ವಿಭಾಗದಿಂದ ಅಂಗಾಂಗ ದಾನದ ಕುರಿತು ಚಿತ್ರಕಲಾ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಅಧ್ಯಾಪಕರು, ವಿದ್ಯಾರ್ಥಿಗಳು ಅಂಗಾಂಗ ದಾನ ಮತ್ತು ಜೀವ ದಾನದ ಪ್ರಯೋಜನಗಳ ಕುರಿತು ವಿವಿಧ ಚಿತ್ರಗಳನ್ನು ರಚಿಸಿದರು. 10 ದಿನಗಳ ಕಾಲ 200ಕ್ಕೂ ಹೆಚ್ಚು ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಈ ವರ್ಣಚಿತ್ರ ಪ್ರದರ್ಶನವು ಸಾಮಾಜಿಕ, ಧಾರ್ಮಿಕ ಮತ್ತು ಭಾವನಾತ್ಮಕ ಸಂದೇಶಗಳ ಮೂಲಕ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೇರೇಪಿಸಿತು.

''ಅಂಗಾಂಗ ದಾನ ಮಾಡಲು ಎಷ್ಟು ಮಂದಿ ವಾಗ್ದಾನ ಮಾಡುತ್ತಿದ್ದಾರೆ ಎಂಬ ಅಂಕಿಅಂಶಗಳು ಅಗತ್ಯವಿಲ್ಲ. ಜನರು ಈ ಉತ್ಸಾಹವನ್ನು ಹೊಂದಿರುವುದು ಮುಖ್ಯ. ಜೀವನದ ನಂತರವೂ ಅವರು ಇತರರಿಗೆ ಸಹಾಯ ಮಾಡಬಹುದು ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವುದು ಬಹಳ ಮುಖ್ಯ. ಯುವಕರು ಅಂಗಾಂಗ ದಾನ ಮಾಡಲು ಮುಂದೆ ಬರುತ್ತಿರುವುದಕ್ಕೆ ಸ್ವಾಗತಾರ್ಹ'' ಎಂದು ಅಂಗಾಂಗ ದಾನ ಸಂಸ್ಥೆ ನಡೆಸುತ್ತಿರುವ ದಿಲೀಪ್ ದೇಶಮುಖ್ ಹೇಳಿದರು.

ಇದನ್ನೂ ಓದಿ:ಮಿಡತೆ, ಜಿರಳೆ ಫ್ರೈ, ಕಪ್ಪು ಸೈನಿಕ ನೊಣದ ಮಸಾಲಾ.. ಧಾರವಾಡ ಕೃಷಿ ಮೇಳದಲ್ಲಿ ಗಮನ ಸೆಳೆದ ಕೀಟ ಭಕ್ಷ್ಯ ಪ್ರದರ್ಶನ

ABOUT THE AUTHOR

...view details