ದಟ್ಟ ಮಂಜಿನಿಂದ ಪಂಜಾಬ್ನಲ್ಲಿ ಸರಣಿ ಅಪಘಾತ: 100 ವಾಹನಗಳು ಜಖಂ, ಓರ್ವ ಸಾವು- ವಿಡಿಯೋ - ದಟ್ಟ ಮಂಜು
Published : Nov 13, 2023, 10:52 PM IST
|Updated : Nov 13, 2023, 11:09 PM IST
ಪಂಜಾಬ್:ದಟ್ಟ ಮಂಜು ಮತ್ತು ಕಲುಷಿತ ವಾತಾವರಣದಿಂದಾಗಿ ಪಂಜಾಬ್ನಲ್ಲಿ ಸೋಮವಾರ ಸರಣಿ ಅಪಘಾತ ಉಂಟಾಗಿ ನೂರಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಪಂಜಾಬ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 13 ಕಿಮೀ ಪ್ರದೇಶದಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ. 100 ಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ. ಅಪಘಾತಗಳು ಒಂದೇ ರಸ್ತೆಯ ವಿವಿಧೆಡೆಗಳಲ್ಲಿ ನಡೆದಿವೆ. ದುರ್ಘಟನೆಗೆ ದಟ್ಟವಾಗಿ ಆವರಿಸಿದ ಮಂಜು ಕಾರಣ ಎಂದು ಗಾಯಾಳುಗಳು ತಿಳಿಸಿದ್ದಾರೆ.
ಲೂಧಿಯಾನ ಜಿಲ್ಲೆಯ ಖನ್ನಾ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊದಲು ಅಪಘಾತ ಸಂಭವಿಸಿದೆ. ಎಸ್‌ಪಿ ಕಚೇರಿಯಿಂದ ಬಿಜಾಗೆ ಹೊರಡುವ ದಾರಿಯಲ್ಲಿ ಹಲವು ವಾಹನಗಳು ಗುದ್ದಿಕೊಂಡಿವೆ. ಇದಾದ ನಂತರ ಗ್ರೀನ್‌ಲ್ಯಾಂಡ್ ಹೋಟೆಲ್ ಬಳಿ ದುರಂತ ನಡೆದಿದೆ. ಇಲ್ಲಿಯೂ ಸುಮಾರು ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ. ಇಲ್ಲಿಂದ ಅನತಿ ದೂರದಲ್ಲಿರುವ ಗುಲ್ಜಾರ್ ಕಾಲೇಜು ಬಳಿಯೂ ವಾಹನಗಳು ಪರಸ್ಪರ ಡಿಕ್ಕಿಯಾಗಿವೆ. 4 ಕಡೆಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿದ್ದರಿಂದ 100ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನರಸೇವಾ ನಾರಾಯಣ ಸೇವಾ ಸಂಸ್ಥೆಯ ಸದಸ್ಯರು ಅಪಘಾತ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಸಂಸ್ಥೆಯ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ:ಹಿಮಾಚಲಪ್ರದೇಶದಲ್ಲಿ ಕಲ್ಲು ತೂರಾಟದ ಜಾತ್ರೆ: ರಕ್ತ ಸುರಿದಲ್ಲಿ ಆಟ ಸ್ಥಗಿತ, ದೇವಿಗೆ ರಕ್ತತರ್ಪಣ!