ಮುಂಗಾರು ಮಳೆಗೆ ಮೈದುಂಬಿದ ಜೋಗ.. ರಾಜಾ, ರಾಣಿ, ರೋರರ್, ರಾಕೆಟ್ ಅಬ್ಬರ- ವಿಡಿಯೋ - ಶಿವಮೊಗ್ಗ ಜೋಗ ಜಲಪಾತ ಫುಲ್
ಶಿವಮೊಗ್ಗ: ಮುಂಗಾರು ಮಳೆ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಬಾರದೆ ಹೋದ್ರು ಸಹ ಶರಾವತಿ ಹಿನ್ನೀರಿನ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ. ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಪ್ರವಾಸಿಗರನ್ನು ಸೆಳೆಯುತ್ತಿವೆ. ಭಾನುವಾರ ರಜೆ ಇರುವ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಜೋಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಜಲಪಾತವನ್ನು ಹತ್ತಿರದಿಂದ ನೋಡಲು ಕೇಬಲ್ ಕಾರ ಅಳವಡಿಕೆ, ಜಲಪಾತ ವೀಕ್ಷಣೆಗೆ ಪ್ರವಾಸಿಗರು ನಿಂತು ನೋಡಲು ದೊಡ್ಡ ಪ್ಲಾಟ್ ಫಾರ್ಮ್, ಜಲಪಾತದ ಮುಂಭಾಗ ಶರಾವತಿ ದೇವಿಯ ಪುತ್ಥಳಿ, ನೂತನ ಪ್ರವಾಸಿ ಮಂದಿರ ಹೀಗೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ.
Last Updated : Feb 3, 2023, 8:24 PM IST