ಕರ್ನಾಟಕ

karnataka

ಗೊಂಬೆಗಳ ಮದುವೆ

ETV Bharat / videos

Monsoon delay: ಮುಂಗಾರು ವಿಳಂಬ.. ಗಂಡು-ಹೆಣ್ಣಿನ ವೇಷದ ಗೊಂಬೆಗಳಿಗೆ ಶಾಸ್ತ್ರೋಕ್ತ ಮದುವೆ.. ಮಳೆಗಾಗಿ ದೇವರ ಮೊರೆ ಹೋದ ಜನ - ಮುಂಗಾರು ವಿಳಂಬ

By

Published : Jun 10, 2023, 5:14 PM IST

ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂವಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದಲ್ಲಿನ ಜನರು ಗೊಂಬೆಗಳ ಮದುವೆ ಮಾಡುವ ಮೂಲಕ ದೇವರ ಮೊರೆ ಹೋಗಿದ್ದಾರೆ. 

ಜೂನ್ ಎರಡನೇ ವಾರ ಕಳೆದರೂ ಮಳೆ ಬಾರದ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳ ಮದುವೆಯನ್ನು ಗ್ರಾಮಸ್ಥರು ಮಾಡಿದ್ದು, ಪೂರ್ವಜರ ಕಾಲದ ಗಂಡು-ಹೆಣ್ಣಿನ ವೇಷದ ಗೊಂಬೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದಾರೆ.

ಚಿಕ್ಕಮಕ್ಕಳ ಕಡೆ ಗಂಡು ಹೆಣ್ಣಿನ ಗೊಂಬೆಗಳನ್ನು ಕೂರಿಸಿ ಎರಡು ಕಡೆಯ ಕುಟುಂಬದವರು ಗೊಂಬೆಗಳನ್ನು ಅಲಂಕರಿಸಿ ನಂತರ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುತ್ತಾರೆ. ಮದುವೆ ಬಳಿಕ ಗ್ರಾಮದಲ್ಲಿ ಈ ಗೊಂಬೆಗಳನ್ನು ಹೊತ್ತು ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡಿ, ಮದುವೆ ಸ್ಥಳಕ್ಕೆ ಅವುಗಳನ್ನು ಕರೆತಂದು ಇಡೀ ಊರಿನ ಗ್ರಾಮಸ್ಥರಿಗೆ ಊಟ ಹಾಕಿಸಲಾಗುತ್ತದೆ.  

ಮಳೆ ಬಾರದಂತಹ ಸಂದರ್ಭದಲ್ಲಿ ಈ ರೀತಿಯಾಗಿ ಪ್ರಾರ್ಥಿಸುವುದು, ದೇವರ ಮೊರೆ ಹೋಗುವುದು ಸಂಪ್ರದಾಯ ಜಿಲ್ಲೆಯಲ್ಲಿ ಹಿಂದಿನಿಂದಲೂ ವಾಡಿಕೆಯಲ್ಲಿದೆ. ಹೀಗಾಗಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಹೀಗೆ ಗೊಂಬೆಗಳ ಮದುವೆ, ಕಪ್ಪೆಗಳ ಮದುವೆ ಮಾಡುವುದು ಸಹಜವಾಗಿದೆ.  

ಇದನ್ನೂ ಓದಿ:Monsoon 2023: ತಡವಾದ ಮುಂಗಾರು.. ಬೆಳೆಯುವ ಮುನ್ನವೇ ಕಮರುತ್ತಿವೆ ಬೀಜ

ABOUT THE AUTHOR

...view details