ಕೋತಿಗೂ ಪಂಚಮಿ ಹಬ್ಬದ ಸಂಭ್ರಮ.. ಜೋಕಾಲಿಯಲ್ಲಿ ಜೀಕಿದ ಕಪಿರಾಯ - ವಿಡಿಯೋ - ಈಟಿವಿ ಭಾರತ ಕನ್ನಡ
ಗದಗ: ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಡಗರ ಜೋರಾಗಿದೆ. ಹೊಸ ಹೊಸ ಸೀರೆ ಉಟ್ಟು ನಾಗಪ್ಪನಿಗೆ ನಾರಿಯರು ಹಾಲು ಎರೆಯವುದು, ಜೋಕಾಲಿ ಆಡುವುದು ಸಂಪ್ರದಾಯ. ಆದರೆ, ಈ ಹಬ್ಬವನ್ನು ಕೋತಿಯೊಂದು ಜೋಕಾಲಿ ಆಡುವುದರ ಮೂಲಕ ಸಂಭ್ರಮಿಸಿದೆ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೋತಿ ಜೋಕಾಲಿ ಆಡಿ ಎಲ್ಲರ ಹುಬ್ಬೇರಿಸಿದೆ. ಲಕ್ಷ್ಮೇಶ್ವರದ ಎ.ಪಿ.ಎಂ.ಸಿ.ಯಲ್ಲಿ ಯುವತಿಯರು ಕಟ್ಟಿ ಆಡುತ್ತಿದ್ದ ಜೋಕಾಲಿಗೆ ದಾಂಗುಡಿ ಇಟ್ಟ ಕಪಿರಾಯ ತಾನೇ ಜೋಕಾಲಿ ಏರಿ ಜೀಕೆ ಹೊಡೆದಿದೆ. ಯುವತಿಯರು ನಾಗರ ಕಟ್ಟೆಗೆ ಹಾಲು ಎರೆಯಲು ಹೋಗಿದ್ದರಿಂದ ಅಲ್ಲಿ ಯಾರು ಇಲ್ಲದ ಸಮಯ ನೋಡಿದ ಮಂಗ ಜೋಕಾಲಿಯ ಮೇಲೆ ಕುಳಿತುಕೊಂಡು ಬಿಂದಾಸ್ ಆಗಿ ಆಟವಾಡಿದೆ.
Last Updated : Feb 3, 2023, 8:25 PM IST