ಕರ್ನಾಟಕ

karnataka

ಪೊಲೀಸ್ ಠಾಣೆಯಲ್ಲಿ ಕೋತಿ

ETV Bharat / videos

ವಿಪರೀತ ಚಳಿ: ಬಿಸಿ ಮಾಡಿಕೊಳ್ಳಲು ಪೊಲೀಸ್ ಠಾಣೆಗೆ ಬಂದ ಕೋತಿ - ವಿಡಿಯೋ - ಪೊಲೀಸ್ ಠಾಣೆಯಲ್ಲಿ ಕೋತಿ

By ETV Bharat Karnataka Team

Published : Jan 18, 2024, 11:05 PM IST

ಕಾನ್ಪುರ್ (ಉತ್ತರ ಪ್ರದೇಶ): ಚಳಿಯಿಂದ ತಪ್ಪಿಸಿಕೊಳ್ಳಲು ಕೋತಿಯೊಂದು ಪೊಲೀಸ್ ಠಾಣೆಗೆ ಬಂದಿದೆ. ಠಾಣೆಯಲ್ಲಿ ಹೀಟರ್​ನಿಂದ ಬೆಂಕಿ ಕಾಯಿಸಿಕೊಳ್ಳುತ್ತಿದ್ದ ಪೊಲೀಸ್ ಹೆಡ್​ಕಾನ್ಸ್​ಟೇಬಲ್ ಅಶೋಕ್ ಗುಪ್ತಾ ಎಂಬುವವರು ಮಾನವೀಯತೆ ಮೆರೆದು, ಕೋತಿಗೂ ಆರೈಕೆ ಮಾಡಿದ್ದಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಗುರುವಾರ ಉತ್ತರ ಪ್ರದೇಶದ ಕಾನ್ಪುರ ಪೊಲೀಸ್ ಕಮಿಷನರೇಟ್‌ನ ಕ್ಯಾಂಪ್​ನಲ್ಲಿರವ ಕಚೇರಿಯಲ್ಲಿ ಈ ಘಟನೆ ನಡೆದಿದೆ. ತರಗುಟ್ಟುವ ಚಳಿಯಿಂದಾಗಿ ಕಚೇರಿಯಲ್ಲಿ ಎಲೆಕ್ಟ್ರಿಕ್ ಹೀಟರ್​ನಿಂದ ಹೆಡ್​ಕಾನ್ಸ್​​ಟೇಬಲ್ ಅಶೋಕ್ ಬಿಸಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ, ಕಚೇರಿಗೆ ಬಂದ ಕೋತಿ ಹೀಟರ್ ಮುಂದಿನ ಕುರ್ಚಿ ಮೇಲೆ ಕುಳಿತು ಬಿಸಿ ಮಾಡಿಕೊಂಡಿದೆ. ಆಗ ಅಲ್ಲೇ ಇದ್ದ ಹೆಡ್​ಕಾನ್ಸಟೇಬಲ್​ ಅಶೋಕ್ ಅವರು ಚಳಿಯಿಂದ ನಡುಗುತ್ತಿದ್ದ ಕೋತಿಗೆ ಆರೈಕೆ ಮಾಡಿದ್ದಾರೆ. ಬಳಿಕ ಕೋತಿಗೆ ಬಿಸ್ಕೆಟ್ ತಿನ್ನಿಸಿದ್ದಾರೆ. ಬಳಿಕ ಕೋತಿ ಅಲ್ಲಿಂದ ಸುಮ್ಮನೆ ತೆರಳಿದೆ. ಕೋತಿ ಕೂಡಾ ಯಾರಿಗೂ ಏನನ್ನೂ ಮಾಡಿಲ್ಲ. ಹೀಟರ್ ಮುಂದೆ ಕುಳಿತ ಕೋತಿಗೆ ಪೊಲೀಸ್ ಹೆಡ್​ಕಾನ್ಸ್​ಟೇಬಲ್ ಆರೈಕೆ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹೆಡ್​ಕಾನ್ಸ್​ಟೇಬಲ್ ತೋರಿದ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ. 

ಇದನ್ನೂ ಓದಿ:ಹಾವೇರಿ: 30 ಕಿಲೋ ಮೀಟರ್ ದೂರ​ ಬಸ್​ನಲ್ಲಿ ಪ್ರಯಾಣಿಸಿದ ಕೋತಿ- ವಿಡಿಯೋ

ABOUT THE AUTHOR

...view details