ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳ್ಳತನ; ಪೊಲೀಸರಿಗೆ ಸವಾಲಾದ ಮಂಕಿ ಕ್ಯಾಪ್ ಕಳ್ಳರು - Ashokanagar and Keshwapur Police Station
ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಟಾರ್ಗೆಟ್ ಮಾಡುವ ಕಳ್ಳರು ತಮ್ಮ ಕರಾಮತ್ತನ್ನು ತೋರಿಸಿ ಎಸ್ಕೇಪ್ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವಳಿನಗರದ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳನ ಚಲವನಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹುಬ್ಬಳ್ಳಿಯ ಅಶೋಕ ನಗರ, ಮಯೂರಿ ಬಡಾವಣೆ, ತಿರುಪತಿ ಬಜಾರ್, ಮಾಗಡಿ ಬಡಾವಣೆ ಗಳಲ್ಲಿ ಕಳೆದ ಎರಡು ತಿಂಗಳಿನಿಂದ ದಿನವೂ ಮನೆ ಕಳ್ಳತನ ನಡೆಯುತ್ತಿವೆ. ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಎಂಟ್ರಿ ಕೊಡುವ ಕಳ್ಳನು ಜನರಲ್ಲಿ ಆತಂಕ ಸೃಷ್ಟಿಸಿದ್ದಾನೆ. ಭಯಭೀತಿಯಲ್ಲೇ ಹುಬ್ಬಳ್ಳಿ ಜನರು ಜೀವನ ನಡೆಸುತ್ತಿದ್ದಾರೆ. ಮಂಕಿ ಕ್ಯಾಪ್ ಹಾಕಿಕೊಂಡು ಎಂಟ್ರಿ ಕೊಡುವ ಕಳ್ಳ ಗ್ಯಾಸ್ ಕಟರ್ ನಿಂದ ಇಂಟರ್ ಲಾಕ್ ಒಡೆದು ಕಳವು ಮಾಡುತ್ತಿರುವ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಪರ್ಯಾಸವೆಂದರೆ ಎರಡು ತಿಂಗಳಾದರೂ ಪೊಲೀಸರಿಗೆ ಕಳ್ಳರನ್ನು ಹಿಡಿಯಲು ಆಗುತ್ತಿಲ್ಲ. ಅಶೋಕನಗರ ಮತ್ತು ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 30 ಕಳ್ಳತನ ನಡೆದಿದ್ದರೂ ಕಳ್ಳನ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
Last Updated : Feb 3, 2023, 8:38 PM IST