ಕರ್ನಾಟಕ

karnataka

Modi roadshow in Bengaluru

ETV Bharat / videos

ಮಿಂಚಿನ ವೇಗದಲ್ಲಿ ಸಾಗಿದ ಮೋದಿ..ಪ್ರಧಾನಿ ನೋಡಿ ಖುಷಿಯಾದ ಜನ.. ಟ್ರಾಫಿಕ್​ನಲ್ಲಿ ಸಿಲುಕಿದ ಆಂಬ್ಯುಲೆನ್ಸ್​

By

Published : May 6, 2023, 5:46 PM IST

ಬೆಂಗಳೂರು:ಮತಬೇಟೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಬಜರಂಗಿ ಧ್ವಜಗಳ ಪ್ರದರ್ಶನದ ಮೂಲಕ ಸಾವಿರಾರು ಕಾರ್ಯಕರ್ತರು ಅವರಿಗೆ ಭವ್ಯ ಸ್ವಾಗತ ಕೋರಿದರು. ಸಮಯಾವಕಾಶ ಕೊರತೆಯಿಂದ ಮಾಗಡಿ ರಸ್ತೆಯಿಂದ ಆರಂಭವಾದ ರೋಡ್​ ಶೋ ಮಲ್ಲೇಶ್ವರದಲ್ಲಿ ಕೊನೆಗೊಂಡಿತು. ವೇಗವಾಗಿ ಸಾಗಿದರೂ ಬೇಸರಿಸಿಕೊಳ್ಳದ ಅಭಿಮಾನಿಗಳು, ತಿರುಪತಿಯಲ್ಲಿ ಬಾಲಾಜಿನ್ನು ನೋಡಿದಂತಾಯಿತು ಎಂದು ಖುಷಿ ವ್ಯಕ್ತಪಡಿದ್ರು. ರೋಡ್ ಶೋ ನಡೆಸುತ್ತಿದ್ದ ರಸ್ತೆಯ ಅಕ್ಕ-ಪಕ್ಕ ಜಮಾವಣೆಗೊಂಡ ಕಾರ್ಯಕರ್ತರು, ಮೋದಿಗೆ ಪುಷ್ಪಮಳೆ ಸುರಿಸಿ ಜಯಘೋಷ ಹಾಕಿದ್ರು. 

ಬಜರಂಗಿಯ ಮುಖವಾಡ ಧರಿಸಿದ ಕಾರ್ಯಕರ್ತರು, ಜೈ ಶ್ರೀರಾಮ್ ಜೈ ಶ್ರೀರಾಮು ಮತ್ತು ಜೈ ಬಜರಂಗಿ ಎಂದು ಘೋಷಣೆ ಮೊಳಗಿಸಿದರು. ಆಯಾ ವಿಧಾನಸಭಾ ಕ್ಷೇತ್ರಗಳಿಗೆ ರೋಡ್ ಶೋ ಬರುತ್ತಿದ್ದಂತೆ ಆಯಾ ಕ್ಷೇತ್ರದ ಅಭ್ಯರ್ಥಿಗಳು ರೋಡ್ ಶೋಗೆ ಅಭೂತಪೂರ್ವ ಸ್ವಾಗತ ಕೋರಿದರು. ಸಾವಿರಾರು ಅಭಿಮಾನಿ ಹಾಗೂ ಕಾರ್ಯಕರ್ತರ ಕೇಕೆ, ಜಯಘೋಷ ಸಿಲಿಕಾನ್ ಸಿಟಿಯಲ್ಲಿ ಮಾರ್ದನಿಸುತ್ತಿತ್ತು. ಆದರೆ, ಸರ್ವಶ್ರೇಷ್ಠ ಮೋದಿ ರೋಡ್​ ಶೋ ವೇಳೆ ಎರಡು ಆಂಬ್ಯುಲೆನ್ಸ್​ಗಳು ಟ್ರಾಫಿಕ್​ನಲ್ಲಿ ಸಿಲುಕಿಕೊಂಡು ಪರದಾಡಬೇಕಾಯಿತು. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 13 ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ ಮೋದಿ, ಪಕ್ಷದ ಅಭ್ಯರ್ಥಿ ಹಾಗೂ ಅಭಿಮಾನಿಗಳಲ್ಲಿ ಹೊಸ ಹುರುಪು ತುಂಬಿದರು. ಯಾವತ್ತೂ ಹತ್ತಿರದಿಂದ ಮೋದಿ ಅವರನ್ನು ನೋಡದ ಜನ ತಮ್ಮ ಮನೆ ಮುಂದೆ ಮೋದಿ ನೋಡಿ ಹರ್ಷ ವ್ಯಕ್ತಪಡಿಸಿದರು. 

ಇದನ್ನೂ ಓದಿ:ಮೋದಿ ರೋಡ್ ಶೋನಲ್ಲಿ ರಾರಾಜಿಸಿದ ಬಜರಂಗಿ ಧ್ವಜಗಳು: ಕೇಸರಿ ಕಾರ್ಯಕರ್ತರಿಂದ ಕಾಂಗ್ರೆಸ್​ಗೆ ಟಕ್ಕರ್

ABOUT THE AUTHOR

...view details