ಕರ್ನಾಟಕ

karnataka

ಯೋಗ ತರಬೇತುದಾರರನ್ನು ಭೇಟಿ ಮಾಡಿದ ಮೋದಿ

ETV Bharat / videos

Modi in Egypt: ಈಜಿಪ್ಟ್ ಯೋಗ ಶಿಕ್ಷಕಿಯರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

By

Published : Jun 25, 2023, 8:17 AM IST

ಈಜಿಪ್ಟ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೈರೋದಲ್ಲಿ ಪ್ರಮುಖ ಯೋಗ ಶಿಕ್ಷಕಿಯರಾದ ರೀಮ್ ಜಬಕ್ ಮತ್ತು ನಾಡಾ ಅಡೆಲ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಈಜಿಪ್ಟ್‌ನಲ್ಲಿ ಯೋಗದ ಜನಪ್ರಿಯತೆಯ ಇಬ್ಬರು ಬೋಧಕರು ಪ್ರಧಾನಿಗೆ ವಿವರಿಸಿದರು. ಇದಕ್ಕೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು.

"ಪ್ರಧಾನಿ ನರೇಂದ್ರ ಮೋದಿ ಯೋಗ ಶಿಕ್ಷಕಿಯರಾದ ರೀಮ್ ಜಬಕ್ ಮತ್ತು ನಾಡಾ ಅಡೆಲ್ ಅವರೊಂದಿಗೆ ಕೈರೋದಲ್ಲಿ ಸಂಭಾಷಣೆ ನಡೆಸಿದರು" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ರೀಮ್ ಜಬಕ್ ಮಾಧ್ಯಮದ ಜೊತೆ ಮಾತನಾಡಿ, "ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮೊಂದಿಗೆ ಯೋಗದ ಕುರಿತು ಸಾಕಷ್ಟು ಚರ್ಚೆ ನಡೆಸಿದರು. ಈಜಿಪ್ಟ್ ಮತ್ತು ಪ್ರಪಂಚಾದ್ಯಂತ ಅವರು ಯೋಗ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿಸಲು ಮುಂದಾಗಿರುವುದು ಸಂತೋಷವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಜೂನ್​ 21ರಂದು ನ್ಯೂಯಾರ್ಕ್​ನ ವಿಶ್ವಸಂಸ್ಥೆಯ ಪ್ರಧಾನ ಕೇಂದ್ರ ಕಚೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮೋದಿ ಪಾಲ್ಗೊಂಡಿದ್ದರು. 135 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮವು ಗಿನ್ನೆಸ್ ದಾಖಲೆ ಪುಸ್ತಕದ ಪುಟ ಸೇರಿದೆ.

ಇದನ್ನೂ ಓದಿ :Modi in Egypt: ಭಾರತದ ಕೋಮು ಸೌಹಾರ್ದತೆ, ಮೋದಿ ನಾಯಕತ್ವ, ಸಮಾನ ಹಕ್ಕುಗಳಿಗೆ ಈಜಿಪ್ಟ್‌ನ ಗ್ರ್ಯಾಂಡ್ ಮುಫ್ತಿ ಮೆಚ್ಚುಗೆ

ABOUT THE AUTHOR

...view details