ನಮ್ಮ ಕರ್ನಾಟಕ ಇಡೀ ರಾಜ್ಯ, ದೇಶಕ್ಕೆ ಮಾದರಿಯಾಗಿದೆ: ಡಿಸಿಎಂ ಡಿ ಕೆ ಶಿವಕುಮಾರ್ - ಸೋಲಾರ್ ಪಾರ್ಕ್
Published : Aug 26, 2023, 4:09 PM IST
ಚಾಮರಾಜನಗರ: "ನಾನು ಮೊದಲನೇ ಬಾರಿಗೆ ಚಾಮರಾಜನಗರಕ್ಕೆ ಕೈಗಾರಿಕ ಪ್ರದೇಶಗಳಿಗೆ ಉತ್ತೇಜನ ಕೊಡಲು ಬಂದಿದ್ದೇನೆ" ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು. ಚಾಮರಾಜನಗರದಲ್ಲಿಂದು ಮಾತನಾಡಿದ ಅವರು, "ಲಿಥಿಯಂ ಬ್ಯಾಟರಿಗಳಲ್ಲಿ ಸೌರ ಶಕ್ತಿಯನ್ನು ಶೇಖರಣೆ ಮಾಡುವ ಹೊಸ ಪ್ಲಾಂಟ್ಅನ್ನು ಇಲ್ಲಿ ಮಾಡುತ್ತಿದ್ದಾರೆ. ಈಗಾಗಲೇ ಸೋಲಾರ್ ಪಾರ್ಕ್ ಇಡೀ ವಿಶ್ವದ ಗಮನ ಸೆಳೆದಿದೆ. ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಪರಿಕಲ್ಪನೆಯನ್ನು ಇಡೀ ದೇಶ, ಭಾರತ ಸರ್ಕಾರ ಒಪ್ಪಿಕೊಂಡು, ಎಲ್ಲಾ ತಾಲೂಕುಗಳಲ್ಲಿ ಸ್ಟೇಷನ್ ಪಕ್ಕದಲ್ಲಿ ಡಿಸ್ಟ್ರಿಬ್ಯೂಟೆಡ್ ಜನರೇಟ್ಅನ್ನು ಸೋಲಾರ್ನಿಂದ ಮಾಡಬೇಕು ಎಂದು ಒಂದು ಯೋಜನೆಯನ್ನು ತಂದಿದ್ದಾರೆ. ನಮ್ಮ ಕರ್ನಾಟಕ ಇಡೀ ರಾಜ್ಯಕ್ಕೆ, ದೇಶಕ್ಕೆ ಮಾದರಿಯಾಗಿದೆ" ಎಂದು ಹೇಳಿದರು.
"ಸೌರ ಶಕ್ತಿಯನ್ನು ಶೇಖರಿಸಲು ಖಾಸಗಿಯವರು ಸುಮಾರು 2000 ಕೋಟಿ ರೂ.ನಷ್ಟು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇಲ್ಲಿ ಸುಮಾರು 500 ಕೋಟಿ ರೂ. ಇನ್ವೆಷ್ಟ್ ಮಾಡುತ್ತಿದ್ದಾರೆ. ಆ ದೃಷ್ಟಿಯಿಂದ ಉತ್ತೇಜನ ಕೊಡಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ಖಾಸಗಿಯವರು ಯಾರಾದರೂ ಚಾಮರಾಜನಗರ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಬಯಸುತ್ತಾರೋ ಅವರಿಗೆ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹವನ್ನು ಕೊಡುತ್ತದೆ. ಇದು ಗಡಿಭಾಗ ಮತ್ತು ಹಿಂದುಳಿದ ಪ್ರದೇಶವಾಗಿರುವುದರಿಂದ ಇಲ್ಲಿ ಉದ್ಯೋಗ ಸೃಷ್ಟಿ ಮಾಡುವವರಿಗೆ ಅವಕಾಶ ಮಾಡಿಕೊಡಬೇಕೆಂಬುದು ಸರ್ಕಾರದ ಅಚಲ ನಿರ್ಧಾರವಾಗಿದೆ" ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ:ಪ್ರಧಾನಿ ಕಚೇರಿ ಸೂಚನೆ ಗೌರವಿಸಿದ್ದೇವೆ: ಪ್ರೋಟೋಕಾಲ್ ವಿಚಾರವಾಗಿ ಡಿಕೆಶಿ ಸ್ಪಷ್ಟನೆ.. ಅಶೋಕ್ಗೆ ತಿರುಗೇಟು