ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಕಳ್ಳನ ಕೈಚಳಕ: ಸಿಸಿ ಕ್ಯಾಮರಾದಲ್ಲಿ ಕಳ್ಳನ ಸೆರೆ! - ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್
ಕಾರವಾರ: ನಗರದ ಜಿಲ್ಲಾ ಆಸ್ಪತ್ರೆ ಹೆರಿಗೆ ವಾರ್ಡ್ ಬಳಿ ರಾತ್ರಿ ವೇಳೆ ಮಲಗಿದ್ದ ವ್ಯಕ್ತಿಯೊಬ್ಬನ ಮೊಬೈಲ್ ಅನ್ನು ಕಳ್ಳನೊಬ್ಬ ಎಗರಿಸಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನದ ಹಿಂದೆ ಹೆರಿಗೆ ವಾರ್ಡ್ ಬಳಿ ಹಲವರು ಮಲಗಿದ್ದು, ಇನ್ನು ಕೆಲವರು ಕುರ್ಚಿ ಮೇಲೆ ಕುಳಿತು ಮಾತನಾಡ ತೊಡಗಿದ್ದರು. ಇದೇ ವೇಳೆ, ಆಗಮಿಸಿದ ಕಳ್ಳನೊಬ್ಬ ಮಲಗಿದ ವ್ಯಕ್ತಿ ಬಳಿ ತಾನು ಮಲಗುವ ರೀತಿ ನಾಟಕ ಮಾಡಿದ್ದಾನೆ. ಬಳಿಕ ವ್ಯಕ್ತಿಯ ತಲೆಯ ಬಳಿ ಮೊಬೈಲ್ ಕಂಡು ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಗಮನಿಸಿ ನಿಧಾನವಾಗಿ ಮೊಬೈಲ್ ಕಳವು ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬೆಳಗ್ಗೆ ಎದ್ದಾಗ ಮೊಬೈಲ್ ಕಾಣದೇ ಇರುವುದನ್ನು ಕಂಡು ದಂಗಾದ ವ್ಯಕ್ತಿ ಸಿಬ್ಬಂದಿಗೆ ತಿಳಿಸಿದ್ದಾರೆ. ಬಳಿಕ ಸಿಸಿ ಟಿವಿ ಚೆಕ್ ಮಾಡಿದಾಗ ಕಳ್ಳನೊಬ್ಬ ಮೊಬೈಲ್ ಎಗರಿಸಿರುವುದು ಪತ್ತೆಯಾಗಿದೆ. ಬಳಿಕ ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮಾಸ್ಕ್ ಧರಿಸಿ ಬಂದು ದರೋಡೆ: ತಡರಾತ್ರಿ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಘಟನೆ