ಲಕ್ಷ್ಮಿ ಹೆಬ್ಬಾಳ್ಕರ್ ಕಾರಿಗೆ ಘೇರಾವ್ ಹಾಕಿದ ರಾಜಹಂಸಗಡ ಗ್ರಾಮಸ್ಥರು - ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ
ಬೆಳಗಾವಿ:ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಾರಿಗೆ ರಾಜಹಂಸಗಡ ಗ್ರಾಮಸ್ಥರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಕಿಗೆ ಬಂದಿದೆ. ರಾಜಹಂಸಗಡದಲ್ಲಿ ನಿರ್ಮಾಣವಾಗಿರುವ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಹೆಬ್ಬಾಳ್ಕರ್ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾರ್ಚ್ ಐದರಂದು ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾಡುವುದಕ್ಕೆ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ.
ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಣ ಮಾರ್ಚ್ 2ನೇ ತಾರೀಕು ಸಿಎಂ ಅವರ ಕೈಯಿಂದ ಪ್ರತಿಮೆ ಉದ್ಘಾಟನೆಗೆ ತಿರ್ಮಾನ ಮಾಡಿದ್ದಾರೆ. ಇದು ಕಾಂಗ್ರೆಸ್ - ಬಿಜೆಪಿ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಎಸ್ಎಂ ಬೆಳವಟಕರ ಕರೆದುಕೊಂಡು ಸಂಧಾನಕ್ಕೆ ಹೋಗಿ ಬರುವಾಗ, ರಾಜಹಂಸಗಡ ಗ್ರಾಮಸ್ಥರು ಶಾಸಕಿ ಕಾರಿ ಘೇರಾವ್ ಹಾಕಿದ ಪ್ರಸಂಗ ನಡೆದಿದೆ ಎಂದು ತಿಳಿದು ಬಂದಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಶಾಸಕಿ ಕಾರನ್ನು ಮುಂದೆ ಬಿಟ್ಟಿರುವ ಪ್ರಸಂಗ ನಡೆಯಿತು.
ಓದಿ: ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ದಿಗೆ ಬದ್ದ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ